- Advertisement -
- Advertisement -
ಕುಂದಾಪುರ, ಮೇ 5: ಕುಂಭಾಶಿ ಗ್ರಾಮದ ನಾಗಾಚಲ ಅಯ್ಯಪ್ಪ ದೇವಸ್ಥಾನದ ಎದುರುಗಡೆ ಮೇ 4ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಎಂಟು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂಭಾಶಿ ವಿನಾಯಕ ನಗರದ ಸುರೇಶ್(25), ರಾಘವೇಂದ್ರ(29), ಕೇಶವ (46), ಕೃಷ್ಣ(56), ನಾಗರಾಜ್, ಗೋವರ್ಧನ, ಸಚಿನ್, ಉಮೇಶ್ ಬಂಧಿತ ಆರೋಪಿಗಳು. ಇವರಿಂದ 4375 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -