ಮಂಗಳೂರು, ಮೇ 5: ಕೋರೋನ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಸೀಲ್ಡೌನ್‌ಗೊಳಗಾಗಿರುವ ಬೋಳೂರು ವಾರ್ಡಿನ ನಿವಾಸಿಗಳಿಗೆ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ಮತ್ತು ಕಾರ್ಪೊರೇಟರ್ ಜಗದೀಶ್ ಶೆಟ್ಟಿಯ ಉಪಸ್ಥಿತಿಯಲ್ಲಿ ಉಸ್ತುವಾರಿ ಅಧಿಕಾರಿ ಲಿಂಗೇಗೌಡರ ಮೂಲಕ ದಿನಸಿ ಸಾಮಾಗ್ರಿಗಳ ಕಿಟ್‌ನ್ನು ಮಂಗಳವಾರ ಹಸ್ತಾಂತರಿಸಲಾಯಿತು.
ಜಿಲ್ಲಾಡಳಿತದ ಆದೇಶದ ಪ್ರಕಾರ ಅಧಿಕಾರಿಗಳೇ ಮನೆ ಮನೆಗೆ ಕಿಟ್ ವಿತರಿಸಲಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಸಕ ಕಾಮತ್ ನಗರದ ಮೂರು ಕಡೆಗಳಲ್ಲಿ ಸೀಲ್ಡೌನ್ ಜಾರಿಗೊಳಿಸಲಾಗಿದೆ. ಸ್ಥಳೀಯ ಅಂಗಡಿಯವರು ಅಧಿಕಾರಿಗಳ ಸಹಾಯದಿಂದ ಪ್ರತೀ ಮನೆಗೂ ಸಾಮಾಗ್ರಿಗಳನ್ನು ತಲುಪಿಸುತ್ತಿದ್ದಾರೆ. ಸೀಲ್ಡೌನ್‌ಗೊಳಗಾಗಿರುವ ಶಕ್ತಿನಗರದ ಕಕ್ಕೆಬೆಟ್ಟು ಹಾಗೂ ಪಡೀಲ್ ಪರಿಸರದ ಸುಮಾರು 500ರಷ್ಟು ಜನರಿಗೆ ಹಿಂದುಸ್ತಾನ್ ಯೂನಿಲಿವರ್ ಸಂಸ್ಥೆಯು ಕಿಟ್ ಒದಗಿಸಲು ಮುಂದೆ ಬರಬೇಕು ಎಂದರು.
ಈ ಸಂದರ್ಭ ಸಂಸ್ಥೆಯಿಂದ ದಿನಸಿ ಸಾಮಗ್ರಿಗಳನ್ನು ಕೊಡಿಸುವಲ್ಲಿ ಶ್ರಮಿಸಿದ ಕಸ್ತೂರಿ ಪ್ರಭೋದ್ ಪೈ, ಸಂಸ್ಥೆಯ ಅಧಿಕಾರಿಗಳಾದ ಸಂಜಯ್ ಸಿಕ್ವೇರಾ, ವಿಘ್ನೇಶ್ವರ ಹೆಗ್ಡೆ, ಚಿದಾನಂದ ಯೆಯ್ಯೆಡಿ, ಸ್ಥಳೀಯರಾದ ರಾಹುಲ್ ಶೆಟ್ಟಿ, ಕಾರ್ತಿಕ್ ಬಂಗೇರಾ, ರೋಶನ್ ಮತ್ತಿತರರು ಉಪಸ್ಥಿತರಿದ್ದರು.