Thursday, June 4, 2026
Homeಕರಾವಳಿನಮಗೆ ಶೆಟ್ಟರಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ; ಧರ್ಮಸ್ಥಳದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ...

ನಮಗೆ ಶೆಟ್ಟರಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ; ಧರ್ಮಸ್ಥಳದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

- Advertisement -
- Advertisement -

ಧರ್ಮಸ್ಥಳ; ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದಲ್ಲಿ‌ ಮಾಜಿ‌ ಸಿ.ಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅವರ ಪಕ್ಷದ ಆಂತರಿಕವಾದ ಬೆಳವಣಿಗೆ. ಅವರೊಬ್ಬ ಅನುಭವಸ್ಥ ರಾಜಕಾರಣಿ. ಅವರು ಬಿಜೆಪಿಯಲ್ಲಿ ಜನಸಂಘದಿಂದಲೂ ಕೆಲಸ ಮಾಡಿದವರು. ಅವರಂತವರೆ ಇಂತಹ ತೀರ್ಮಾನ ಮಾಡಿದ್ದಾರೆ ಎಂದರು.

ಹಿಂದೆ ಬಿಜೆಪಿಯಲ್ಲಿ ನಡೆಯುತ್ತಿರುವ ಡಿ.ಎನ್.ಎ ಬಗ್ಗೆ ಮಾತನಾಡಿದ್ದೆ. ಆ ಡಿ.ಎನ್.ಎ ಪ್ರಸ್ತುತವಾಗಿ ಅಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿದೆ. ಜಗದೀಶ್ ಶೆಟ್ಟರ್ ನನ್ನನ್ನು‌ ಸಂಪರ್ಕ ಮಾಡಿಲ್ಲ. ನಮಗೆ ಅಂತಹ‌ ದೊಡ್ಡ ನಾಯಕರ ಅವಶ್ಯಕತೆ ಇಲ್ಲ. ಸಣ್ಣವರು ಯಾರಾದರೂ ಬಂದ್ರೆ ತಗೊತ್ತೇವೆ. ಯಾಕಂದ್ರೆ ನಮ್ಮದು ಸಣ್ಣ ಪಕ್ಷ. ದೊಡ್ಡ ನಾಯಕರ ಬಗ್ಗೆ ನಿರೀಕ್ಷೆ ಇಟ್ಟುಕೊಂಡ್ರೆ ಅದು ನಮಗೆ ಬಹಳ ಆಸೆ ಆಗುತ್ತೆ. ಹೀಗಾಗಿ ದೊಡ್ಡ ನಾಯಕರ ಬಗ್ಗೆ ಆ ರೀತಿಯ ನಿರೀಕ್ಷೆ ಇಟ್ಟುಕೊಂಡಿಲ್ಲ. ಕಾಂಗ್ರೆಸ್ ನವರು ಮಾತುಕತೆ ನಡೆಸಿದ್ರೆ ಅದು ಅವರಿಗೆ ಸೇರಿದ್ದು ನನಗೆ ಸಂಬಂಧ ಇಲ್ಲ ಎಂದು ಧರ್ಮಸ್ಥಳದಲ್ಲಿ‌ ಮಾಜಿ ಸಿ.ಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!