Thursday, June 4, 2026
HomeUncategorizedಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ- ನಳೀನ್ ಕುಮಾರ್ ಕಟೀಲ್

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರೋದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ- ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಬೆಂಗಳೂರು; ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ರಿಯಾಕ್ಟ್ ಮಾಡಿದ್ದಾರೆ. ಶೆಟ್ಟರ್ ಅವರ ಜೊತೆ ಎಲ್ಲ ಹಿರಿಯರು ಮಾತುಕತೆ ನಡೆಸಿದ್ದರು. ಎಲ್ಲ‌ ಹಂತದ ಮಾತುಕತೆಗಳನ್ನೂ ಶೆಟ್ಟರ್ ಜತೆ ನಡೆಸಿದ್ದರು. ಮಾತುಕತೆ ನಡೆಸಿದ್ದರೂ ಅವರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.

ಇನ್ನು ಅವರ ಮನವೊಲಿಸುವ ಕೆಲಸವನ್ನು ಎಲ್ಲ ಹಿರಿಯರೂ ಮಾಡಿದ್ದಾರೆ. ಶೆಟ್ಟರ್ ಗೆ ಎಲ್ಲ ಗೌರವ ಕೊಟ್ಟಿತ್ತು ಪಕ್ಷ. ಎಲ್ಲಾ ಜವಾಬ್ದಾರಿಗಳನ್ನು ಕೊಟ್ಟಿತ್ತು. ಆದರೆ ಅದೆಲ್ಲವನ್ನು ಲೆಕ್ಕಿಸಿದೇ ಅವರು ಹೋಗಿದ್ದಾರೆ. ಶೆಟ್ಟರ್ ಪಕ್ಷ ಬಿಟ್ಟಿರೋದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ. ಅವರು ನಮ್ಮಲ್ಲೇ ಉಳ್ಕೋತಾರೆ ಅಂತ ವಿಶ್ವಾಸ ಇತ್ತು ಎಂದಿದ್ದಾರೆ.

- Advertisement -

Latest News

error: Content is protected !!