Thursday, June 25, 2026
Homeಕರಾವಳಿಮಂಗಳೂರು; ಬಾವಿ ಕಟ್ಟೆಯಲ್ಲಿ ಕೂತಿದ್ದ ವ್ಯಕ್ತಿ ನಿದ್ದೆ ಮಂಪರಿನಲ್ಲಿ ಬಾವಿಗೆ ಬಿದ್ದು ಸಾವು

ಮಂಗಳೂರು; ಬಾವಿ ಕಟ್ಟೆಯಲ್ಲಿ ಕೂತಿದ್ದ ವ್ಯಕ್ತಿ ನಿದ್ದೆ ಮಂಪರಿನಲ್ಲಿ ಬಾವಿಗೆ ಬಿದ್ದು ಸಾವು

- Advertisement -
- Advertisement -

ಮಂಗಳೂರು : ಬಾವಿ ಕಟ್ಟೆಯಲ್ಲಿ ಕೂತಿದ್ದ ವ್ಯಕ್ತಿ ನಿದ್ದೆ ಮಂಪರಿನಲ್ಲಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಈ ಘಟನೆ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಮೃತ ದುರ್ದೈವಿ. ಇವರು ವಾಲ್ಟರ್ ತೊಕ್ಕೊಟ್ಟಿನ ಚರ್ಚ್ ಗೆ ಶನಿವಾರ ಸಂಜೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು.
ರಾತ್ರಿ 7.23 ರ ಹೊತ್ತಿಗೆ ಮನೆಯಂಗಳದ‌ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದಾಗ ನಿದ್ರೆಯ ಮಂಪರಿನಿಂದ ಸಡನ್ ಬಾವಿಯೊಳಗೆ ಬಿದ್ದಿದ್ದಾರೆ.ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದರು. ತಲೆಗೆ ಗಂಭೀರವಾಗಿ ಏಟಾದ ಪರಿಣಾಮ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ,ಇಬ್ಬರು ಗಂಡು ಮಕ್ಕಳು ಇದ್ದಾರೆ.

- Advertisement -

Latest News

error: Content is protected !!