Thursday, June 4, 2026
Homeತಾಜಾ ಸುದ್ದಿನಾಳೆಯಿಂದ ಪ್ರತಿಭಟನೆ ನಡೆಸೋದಕ್ಕೆ ನಿರ್ಧರಿಸಿದ ಸಾರಿಗೆ ಸಿಬ್ಬಂದಿ: ಬಸ್ ಗಳ ಸಂಚಾರದಲ್ಲಿ ಆಗುತ್ತಾ ವ್ಯತ್ಯಯ?

ನಾಳೆಯಿಂದ ಪ್ರತಿಭಟನೆ ನಡೆಸೋದಕ್ಕೆ ನಿರ್ಧರಿಸಿದ ಸಾರಿಗೆ ಸಿಬ್ಬಂದಿ: ಬಸ್ ಗಳ ಸಂಚಾರದಲ್ಲಿ ಆಗುತ್ತಾ ವ್ಯತ್ಯಯ?

- Advertisement -
- Advertisement -

ಬೆಂಗಳೂರು: ಸಾರಿಗೆ ಸಿಬ್ಬಂದಿ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಿದ್ದು, ನಾಳೆ ಬಿಎಂಟಿಸಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವ ಸಾರಿಗೆ ಸಿಬ್ಬಂದಿ, ತಮಗೆ ನೀಡುತ್ತಿರುವ ಅರ್ಧ ವೇತನ, ಅಧಿಕಾರಿಗಳ ವಿರುದ್ಧ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ರಜೆ ಸಮಸ್ಯೆ ಪರಿಹರಿಸಲು ಕೋರಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಎಲ್ಲಾ ಸಂಘಟನೆಗಳು ಒಂದಾಗಿ ಪ್ರತಿಭಟನೆ ನಡೆಸಲಿವೆ.

ನಾಳೆ ಸಾರಿಗೆ ಸಿಬ್ಬಂದಿಯಿಂದ ಬೃಹತ್ ಪ್ರತಿಭಟನೆ ನಡೆದರೂ ಕೂಡ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದಿನಂತೆ ಬಸ್ ಸಂಚಾರ ಇರಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!