Monday, May 13, 2024
Homeಕರಾವಳಿ71 ವಯಸ್ಸಿನಲ್ಲಿ 11 ಘನ ವಾಹನಗಳ ಲೈಸನ್ಸ್ ಹೊಂದಿದ್ದಾರೆ ಕೇರಳದ ಈ ಅಜ್ಜಿ: ರಾಧಾಮಣಿ ಈಗ ...

71 ವಯಸ್ಸಿನಲ್ಲಿ 11 ಘನ ವಾಹನಗಳ ಲೈಸನ್ಸ್ ಹೊಂದಿದ್ದಾರೆ ಕೇರಳದ ಈ ಅಜ್ಜಿ: ರಾಧಾಮಣಿ ಈಗ  ಮೆಕಾನಿಕಲ್ ಎಂಜಿನಿಯರಿಂಗ್‌ ಡಿಪ್ಲೋಮಾ ವಿದ್ಯಾರ್ಥಿನಿ

spot_img
- Advertisement -
- Advertisement -

ಕೇರಳ: ಸಾಧನೆಗೆ ವಯಸ್ಸಿನ ಹಂಗಿಲ್ಲ ಅಂತಾರೆ. ಕೇರಳದ 71ರ ಹರೆಯದ ರಾಧಾಮಣಿ ಅವರನ್ನೇ ನೋಡಿ ಈ ಮಾತು ಹೇಳಿರಬೇಕು ಅನ್ಸುತ್ತೆ. ಕೇರಳದ ಈಗ ಗಟ್ಟಿಗಿತ್ತಿ ಅಜ್ಜಿ  ಕ್ರೇನ್, ಬುಲ್ಡೋಜರ್, ರೋಡ್ ರೋಲರ್ ಸೇರಿದಂತೆ 11 ಘನ ವಾಹನಗಳ ಲೈಸೆನ್ಸ್ ಹೊಂದಿದ್ದಾರೆ. ಅಷ್ಟೇ ಸುಲಭವಾಗಿ ಈ ಎಲ್ಲಾ ವಾಹನಗಳನ್ನು ಚಲಾಯಿಸುತ್ತಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ.

1971ರಲ್ಲಿ ರಾಧಾಮಣಿ ಅವರ ಪತಿ ಡ್ರೈವಿಂಗ್ ಸ್ಕೂಲ್ ಆರಂಭಿಸಿದ್ದರು. ಅಲ್ಲಿಂದ ರಾಧಾಮಣಿಯ ಡ್ರೈವಿಂಗ್ ಆಸಕ್ತಿ ಹೆಚ್ಚಾಯಿತು. 70ರ ದಶಕದಲ್ಲಿ ಮಹಿಳೆಯರು ಘನ ವಾಹನಗಳ ಡ್ರೈವಿಂಗ್ ಮಾಡುತ್ತಿರಲಿಲ್ಲ. ಅಂದು ಪತಿ ಆರಂಭಿಸಿದ ಡ್ರೈವಿಂಗ್ ಸ್ಕೂಲ್‌ನಿಂದ ಆರಂಭದಲ್ಲೇ ಬಸ್ ಹಾಗೂ ಲಾರಿ ಚಲಾಯಿಸಲು ಕಲಿತ ರಾಧಾಮಣಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಎಲ್ಲಾ ಘನವಾಹನಗಳ ಡ್ರೈವಿಂಗ್ ಕಲಿತುಕೊಂಡರು. ಇವೆಲ್ಲವೂ ರಾಧಾಮಣಿಯ ಆಸಕ್ತಿಯ ವಿಷಯಗಳಾಗಿತ್ತು.ಇಷ್ಟೇ ಅಲ್ಲ ಈ ಎಲ್ಲಾ ಘನ ವಾಹನಗಳ ಚಲಾಯಿಸಲು ಲೈಸೆನ್ಸ್ ಕೂಡ ಪಡೆದುಕೊಂಡರು. ಪತಿಯ ಬೆಂಬಲದಿಂದ ಎಲ್ಲಾ ಲೈಸೆನ್ಸ್ ಪಡೆಯಲು ಸಾಧ್ಯವಾಯಿತು ಎಂದು ರಾಧಾಮಣಿ ಹೇಳುತ್ತಾರೆ.

2004ರಲ್ಲಿ ನಡೆದ ಅಪಘಾತದಲ್ಲಿ ರಾಧಾಮಣಿ ಪತಿಯನ್ನು ಕಳೆದುಕೊಂಡರು. ಈ ಸಂಕಷ್ಟದ ಸಂದರ್ಭದಲ್ಲಿ ರಾಧಾಮಣಿ ಪತಿಯ ಡ್ರೈವಿಂಗ್ ಸ್ಕೂಲ್ ಮುನ್ನಡೆಸಲು ಮುಂದಾದರು. ಎಲ್ಲಾ ಡ್ರೈವಿಂಗ್ ತಿಳಿದಿದ್ದ ರಾಧಾಮಣಿಗೆ ಡ್ರೈವಿಂಗ್ ಸ್ಕೂಲ್ ಮುನ್ನಡೆಸುವುದು ಕಷ್ಟದ ವಿಚಾರ ಆಗಿರಲಿಲ್ಲ.

ರಾಧಾಮಣಿಯವರ ಡ್ರೈವಿಂಗ್ ಸ್ಕೂಲ್‌ನಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಘನ ವಾಹನಗಳ ಡ್ರೈವಿಂಗ್ ಪಡೆದುಕೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಮಹಿಳೆಯರು ಡ್ರೈವಿಂಗ್ ಮೂಲಕ ಹೊಸ ಬದುಕು ಕಟ್ಟಿಕೊಂಡವರ ಸಂಖ್ಯೆಯೂ ಬಹಳಷ್ಟಿದೆ. ಮಹಿಳೆಯರಿ ಸ್ಪೂರ್ತಿಯಾಗಿರುವ ರಾಧಾಮಣಿಯಮ್ಮ ಕೇರಳದಲ್ಲಿ ಮನೆ ಮಾತಾಗಿದ್ದಾರೆ.

- Advertisement -
spot_img

Latest News

error: Content is protected !!