Friday, May 10, 2024
Homeತಾಜಾ ಸುದ್ದಿಇನ್ಮೇಲೆ ಕೆಎಸ್ಆರ್ ಟಿಸಿ ಹೆಸರು ಬಳಕೆ ಮಾಡುತ್ತಿಲ್ಲ ಕರ್ನಾಟಕ; ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌...

ಇನ್ಮೇಲೆ ಕೆಎಸ್ಆರ್ ಟಿಸಿ ಹೆಸರು ಬಳಕೆ ಮಾಡುತ್ತಿಲ್ಲ ಕರ್ನಾಟಕ; ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌ ಮಾರ್ಕ್‌

spot_img
- Advertisement -
- Advertisement -

ಕೇರಳ;  ಏಳು ವರ್ಷಗಳ ಕಾನೂನು ಹೋರಾಟದ ಬಳಿಕ KSRTC ಬ್ರಾಂಡ್‌ ಕೇರಳ ರಾಜ್ಯದ ಪಾಲಾಗಿದೆ. ಕರ್ನಾಟಕ  ಕೆಎಸ್‌ಆರ್‌ಟಿಸಿ ಹೆಸರು ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದೆ.

ನಿನ್ನೆ ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈ ಕುರಿತು ತೀರ್ಪು ನೀಡಿದೆ. ತೀರ್ಪಿನ Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಮತ್ತು ಕೇರಳ ರಾಜ್ಯದ ನಡುವೆ KSRTC ವಿಸ್ತೃತ ರೂಪಕ್ಕಾಗಿ ಕಾನೂನು ಹೋರಾಟ ನಡೆಯುತ್ತಿತ್ತು. ಈ ಹೋರಾಟದಿಂದ ಕೇರಳಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯದ ಸಾರಿಗೆ ನಿಗಮ ನಷ್ಟವನ್ನು ಎದುರಿಸುತ್ತಿದೆ.

ಕೇರಳ ಮತ್ತು ಕರ್ನಾಟಕ 2013ರಲ್ಲಿ KSRTC ವಿಸ್ತ್ರತ ರೂಪಕ್ಕಾಗಿ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದವು. ಕೇರಳ ರಾಜ್ಯವು Kerala State Road Transport Corporation (KSRTC) ಹೆಸರಿನಲ್ಲಿ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈಗ ತೀರ್ಪು ಪ್ರಕಟವಾಗಿದ್ದು ಕೆಎಸ್‌ಆರ್‌ಟಿಸಿ ಕೇರಳದ ಪಾಲಾಗಿದೆ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸಲಾಗಿದೆ.

ಟ್ರೇಡ್ ಮಾರ್ಕ್‌ ರಿಜಿಸ್ಟರಿ ನೀಡಿರುವ ತೀರ್ಪಿನ ಕುರಿತು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಕ್ಷಣದಿಂದಲೇ ಕರ್ನಾಟಕ ಕೆಎಸ್‌ಆರ್‌ಟಿಸಿ ಹೆಸರು ಬಳಕೆ ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!