Sunday, June 7, 2026
Homeಕರಾವಳಿಉಡುಪಿಮುಂಬೈಯ ಹಿರಿಯ ಹೋಟೆಲ್ ಉದ್ಯಮಿ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿಯವರ ನಿಧನಕ್ಕೆ...

ಮುಂಬೈಯ ಹಿರಿಯ ಹೋಟೆಲ್ ಉದ್ಯಮಿ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿಯವರ ನಿಧನಕ್ಕೆ ಕೇಮಾರು ಶ್ರೀ ಸಂತಾಪ

- Advertisement -
- Advertisement -

ಕೇಮಾರು: ನಿವೃತ್ತ ಶಿಕ್ಷಕ, ಮುಂಬೈಯ ಹಿರಿಯ ಹೋಟೆಲ್ ಉದ್ಯಮಿ , ಪುತ್ತಿಗೆ ಗುತ್ತು ಕಡಂದಲೆ ಪರಾರಿ ಪ್ರಭಾಕರ್ ಎಲ್ ಶೆಟ್ಟಿಯವರ ನಿಧನಕ್ಕೆ ಕೇಮಾರು ಶ್ರೀ ಕ್ಷೇತ್ರದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

“ದೇಹಕ್ಕೆ ವಿಯೋಗವೇ ಹೊರತು ಆತ್ಮಕ್ಕಲ್ಲ” ಎಂಬ ಗೀತೆಯ ನುಡಿಯಂತೆ ಬದುಕಿನುದ್ದಕ್ಕೂ ಬಾಳಿ, ಮುಂಬೈ, ಕಡಂದಲೆ ಹಾಗೂ ಪರಾಡಿ ಮನೆತನದ ಗೌರವವನ್ನು ಹೆಚ್ಚಿಸಿದ ಕೀರ್ತಿ ನಿಮ್ಮದು. ಪ್ರೊಫೆಸರ್ ಹಾಗೂ ಯಶಸ್ವಿ ಹೋಟೆಲ್ ಉದ್ಯಮಿಯಾಗಿ, ಸಾಮಾಜಿಕ ಸೇವೆಗಳಲ್ಲಿ ಭಾಗಿಯಾಗಿ ಹಲವಾರು ವಿದ್ಯಾರ್ಥಿಗಳಿಗೆ ವಿಧ್ಯಾದಾನಗೈದು ಅವರ ಬಾಳಿಗೆ ಬೆಳಕಾಗಿರುವಂತಹ ತಾವು, ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಸಂಸ್ಥಾಪಕರಲ್ಲಿ ಒಬ್ಬರಾದ ನಿಮ್ಮ ಆತ್ಮಕ್ಕೆ ಲಕ್ಷ್ಮೀನಾರಾಯಣ ದೇವರ ಪದತಳಗಳಲ್ಲಿ ಮೋಕ್ಷವನ್ನೀಯಲಿ ಎಂದು ಕೇಮಾರು ಶ್ರೀಗಳು ಪ್ರಾರ್ಥಿಸಿದ್ದಾರೆ.

- Advertisement -

Latest News

error: Content is protected !!