Monday, June 8, 2026
Homeಕರಾವಳಿಕಾಸರಗೋಡು: ಚರ್ಚ್ ಪರಿಸರದಲ್ಲಿರುವ ಪ್ರತಿಮೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ಕಾಸರಗೋಡು: ಚರ್ಚ್ ಪರಿಸರದಲ್ಲಿರುವ ಪ್ರತಿಮೆ ಮೇಲೆ ದುಷ್ಕರ್ಮಿಗಳಿಂದ ದಾಳಿ

- Advertisement -
- Advertisement -

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಯಂಪಾರೆಯ ಸಂತ ಲಾರೆನ್ಸ್ ಇಗರ್ಜಿಯ ಪರಿಸರದಲ್ಲಿದ್ದ ಸಂತ ಲಾರೆನ್ಸ್ ರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಕೃತ್ಯ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಇಗರ್ಜಿಗೆ ತೆರಳು ರಸ್ತೆ ಪಕ್ಕದಲ್ಲಿ ಸ್ಥಾಪಿಸಲ್ಪಟ್ಟಿರುವ ಲಾರೆನ್ಸ್ ರ ಪ್ರತಿಮೆಯನ್ನು ರವಿವಾರ ರಾತ್ರಿ ಕಲ್ಲೆಸೆದು ಧ್ವಂಸಗೊಳಿಸಲಾಗಿದೆ. ಗಾಜಿನ ಚೌಕಟ್ಟಿನ ಒಳಗಡೆಯಿದ್ದ ಪ್ರತಿಮೆಗೆ ಕಲ್ಲೆಸೆದ ಪರಿಣಾಮ ಗಾಜು ಪುಡಿಯಾಗಿದೆ. ಪ್ರತಿಮೆಯ ತಲೆಭಾಗ ತುಂಡಾಗಿ ಬಿದ್ದಿದೆ.

ಘಟನಾ ಸ್ಥಳಕ್ಕೆ ಬದಿಯಡ್ಕ ಠಾಣಾ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ನಾಮನಿರ್ದೇಶಿತ ಅಧ್ಯಕ್ಷ ರಾಜು ಸ್ಟೀಫನ್ ಡಿ ಸೋಜಾ, ಕುಂಬ್ಳೆ, ಕಾಸರಗೋಡಿನ ಕ್ಯಾಥೊಲಿಕ್ ಸಭಾದ ಅಧ್ಯಕ್ಷ ವಿಲ್ಫ್ರೆಡ್ ಮನೋಹರ್ ಕ್ರಾಸ್ತಾ ಅವರು ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.
ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಚರ್ಚ್ ಆಡಳಿತ ಸಮಿತಿ ಒತ್ತಾಯಿಸಿದೆ

- Advertisement -

Latest News

error: Content is protected !!