Thursday, June 4, 2026
Homeಕರಾವಳಿಕಾಸರಗೋಡು;  ಮಂಜೇಶ್ವರದಲ್ಲಿ ಉಪ್ಪಿನಂಗಡಿ ಮೂಲದ ದರೋಡೆಕೋರನನ್ನು ಬಂಧಿಸಿದ ಪೊಲೀಸರು

ಕಾಸರಗೋಡು;  ಮಂಜೇಶ್ವರದಲ್ಲಿ ಉಪ್ಪಿನಂಗಡಿ ಮೂಲದ ದರೋಡೆಕೋರನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕಾಸರಗೋಡು;  ಉಪ್ಪಿನಂಗಡಿ ಮೂಲದ ದರೋಡೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಗಸ್ತಿನಲ್ಲಿದ್ದ ಮಂಜೇಶ್ವರದಲ್ಲಿ ಪೊಲೀಸರಿಗೆ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಯುವಕನ ಸಿಕ್ಕಿ ಬಿದ್ದಿದ್ದಾನೆ. ಅನುಮಾನ ಬಂದು ವಿಚಾರಿಸಿದಾಗ ದರೋಡೆಕೋರನ ಅಸಲಿಯತ್ತು ಗೊತ್ತಾಗಿದೆ. ಉಪ್ಪಿನಂಗಡಿ ನಿವಾಸಿ ಗೋಲಿ ಹನೀಫ (34) ಯಾನೆ ಮೊಹಮ್ಮದ್ ಹನೀಫ್ ಬಂಧಿತ ಆರೋಪಿ.

ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಟಾಲ್ಸನ್ ಜೋಸೆಫ್ ಮತ್ತು ಎಸ್‌ಐ ನಿಖಿಲ್ ಯುವಕನನ್ನು ಠಾಣೆಗೆ ಕರೆ ತಂದು ವಿಚಾರಿಸಿದಾಗ ಆತ ಓರ್ವ ದರೋಡೆಕೋರ ಅನ್ನೋದು ಗೊತ್ತಾಗಿದೆ. ಆರೋಪಿಯಾಗಿದ್ದು  ವಿಚಾರಣೆ ನಡೆಸಿದಾಗ ತಿಂಗಳ ಹಿಂದೆ ನಾಚಿಲಪದವು ಸುಂಗಟಕಟ್ಟಾ ಎಂಬಲ್ಲಿ ಬೀಗ ಹಾಕಿದ ಮನೆಯಲ್ಲಿ ದರೋಡೆ ಮಾಡಿರುವುದಾಗಿ ಮಹಮ್ಮದ್ ಹನೀಫ್ ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಕೇರಳ ಹಾಗೂ ಕರ್ನಾಟಕದಲ್ಲೂ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!