Thursday, June 4, 2026
Homeಕೊಡಗುಕೊಡಗು; ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಲ್ಲೇ ಆತ್ಮಹತ್ಯೆ

ಕೊಡಗು; ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಲ್ಲೇ ಆತ್ಮಹತ್ಯೆ

- Advertisement -
- Advertisement -

ಕೊಡಗು; ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ  ನಾಪೋಕ್ಲು ಬಳಿಯ ಕಕ್ಕಬ್ಬೆಯಲ್ಲಿ ನಡೆದಿದೆ.

ಬ್ಯಾಂಕಿನ ಕಕ್ಕಬ್ಬೆ ಶಾಖೆಯ ಮೆನೇಜರ್ ವಿಜು(46) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ್ಮಹತ್ಯೆ ಕಾರಣ ತಿಳಿದುಬಂದಿಲ್ಲ.   ವಿಜು ಮೂಲತಃ ಕೇರಳದ ಆಲಪುಝ್ಝ ಆಯಿಕ್ಕಾಡ್ ಚಿಂಗೋಲಿ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪತ್ನಿ ಕೂಡ ಇದೇ ರಾಷ್ಟ್ರೀಕೃತ ಬ್ಯಾಂಕ್ ನ ಬೆಟ್ಟಗೇರಿ ಶಾಖೆಯ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಪೊಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!