Friday, April 26, 2024
Homeತಾಜಾ ಸುದ್ದಿಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ಲಭ್ಯ: ಸಚಿವ ಡಾ.ಸುಧಾಕರ್

ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ಲಭ್ಯ: ಸಚಿವ ಡಾ.ಸುಧಾಕರ್

spot_img
- Advertisement -
- Advertisement -

ಬೆಂಗಳೂರು: ಕೊರೊನಾ ಲಸಿಕೆ ನಿರೀಕ್ಷತರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು, ಇದೇ ಜನವರಿ 11ರಿಂದ ಅಂದ್ರೆ ಸೋಮವಾರದಿಂದ ರಾಜ್ಯದಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೊದಲ ಹಂತದಲ್ಲಿ 13.90 ಲಕ್ಷ ಕೋವಿಡ್ ಲಸಿಕೆಯನ್ನು ನಿಗದಿಪಡಿಸಿದೆ. ನಾಳೆ ಆಗಮಿಸಲಿದ್ದು, ನಿಗದಿತ ಸ್ಟೋರೇಜ್‍ಗಳಲ್ಲಿ ಸಂಗ್ರಹಣೆ ಮಾಡಲಿದ್ದೇವೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಆಶಾ ಕಾರ್ಯಕರ್ತೆಯರು, ಕೋವಿಡ್ ವಾರಿಯರ್ಸ್‍ಗಳಿಗೆ ವಿತರಣೆ ಮಾಡಲಾಗುವುದು. ನಂತರ ಕೇಂದ್ರದಿಂದ ಅನುಮತಿ ಸಿಕ್ಕ ತಕ್ಷಣವೇ ಸಾರ್ವಜನಿಕರಿಗೆ ವಿತರಿಸುತ್ತೇವೆ ಎಂರು ಸಚಿವರು ತಿಳಿಸಿದ್ದು, ಈಗಾಗಲೇ ಲಸಿಕೆ ತೆಗೆದುಕೊಳ್ಳುವವರ ಪಟ್ಟಿ ಸಿದ್ಧವಾಗಿದ್ದು, ಇಂದು ಅಥವಾ ನಾಳೆ ಲಸಿಕೆ ಪಡೆಯುವವರ ಮೊಬೈಲ್ʼಗೆ ಮೆಸೇಜ್‌ ಹೋಗುವ ಸಾಧ್ಯತೆ ಇದೆ. ಈ ಸಂದೇಶದಲ್ಲಿ ಲಸಿಕೆ ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ನೀಡಲಾಗುತ್ತೆ ಎನ್ನುವ ಎಲ್ಲ ವಿವರಗಳು ಇರುತ್ತೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!