Friday, June 26, 2026
Homeಕರಾವಳಿಸಿಸಿಬಿ ವಿಚಾರಣೆಗೆ ಹಾಜರಾದ ರಾಧಿಕ ಕುಮಾರಸ್ವಾಮಿ: ಸ್ವೀಟಿ ಮೊಬೈಲ್ ವಶಕ್ಕೆ ಪಡೆದ ಪೊಲೀಸರು

ಸಿಸಿಬಿ ವಿಚಾರಣೆಗೆ ಹಾಜರಾದ ರಾಧಿಕ ಕುಮಾರಸ್ವಾಮಿ: ಸ್ವೀಟಿ ಮೊಬೈಲ್ ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಬೆಂಗಳೂರು:​ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆ ಇಂದು ರಾಧಿಕಾ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮೊಬೈಲ್ ಅನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಆರ್​ಎಸ್​​ಎಸ್​-ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪದ ಮೇಲೆ ಅರೆಸ್ಟ್​ ಆಗಿರುವ ಯುವರಾಜ್ ಅಲಿಯಾಸ್​ ಸ್ವಾಮಿ, ಡೀಲ್​ವೊಂದರ ಭಾಗವಾಗಿ ರಾಧಿಕಾ ಅವರ ಅಕೌಂಟ್​ಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾನೆಂಬ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣ ಸಂಬಂಧ ರಾಧಿಕಾ ಸಹೋದರ ರವಿರಾಜ್​ರನ್ನ ಒಂದು ವಾರದ ಹಿಂದೆ ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು.

ಆರೋಪ ಪ್ರಕರಣ ಸಂಬಂಧ ನಿನ್ನೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಿದ್ದರು. ಅದರಂತೆ ರಾಧಿಕಾ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ತನಿಖೆಯ ಒಂದು ಭಾಗವಾಗಿ ಅವರ ಮೊಬೈಲ್ ಅನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!