Friday, May 17, 2024
Homeತಾಜಾ ಸುದ್ದಿಕರ್ನಾಟಕ ನೂತನ ಲೋಕಾಯುಕ್ತರಾಗಿ ಹೈಕೋರ್ಟ್‌ನ ಹೈಕೋರ್ಟ್‌ ಬಿ.ಎಸ್.ಪಾಟೀಲ್ ನೇಮಕ

ಕರ್ನಾಟಕ ನೂತನ ಲೋಕಾಯುಕ್ತರಾಗಿ ಹೈಕೋರ್ಟ್‌ನ ಹೈಕೋರ್ಟ್‌ ಬಿ.ಎಸ್.ಪಾಟೀಲ್ ನೇಮಕ

spot_img
- Advertisement -
- Advertisement -

ಬೆಂಗಳೂರು: ಕರ್ನಾಟಕದ ಲೋಕಾಯುಕ್ತರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.


ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ನಂತರ ತೆರವಾಗಿರುವ ಸ್ಥಾನಕ್ಕೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಇವರು ಇಲ್ಲಿಯವರೆಗೆ ಉಪ ಲೋಕಾಯುಕ್ತ ಸೇವೆ ಸಲ್ಲಿಸುತ್ತಿದ್ದರು.


ನ್ಯಾ.ಬಿ.ಎಸ್.ಪಾಟೀಲ್ 14 ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಅವರು 20 ವರ್ಷಗಳ ಕಾಲ ವಕೀಲರಾಗಿದ್ದರು. 2019ರ ನವೆಂಬರ್‌ನಲ್ಲಿ ಇವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು.

- Advertisement -
spot_img

Latest News

error: Content is protected !!