Friday, May 17, 2024
Homeತಾಜಾ ಸುದ್ದಿಮಂಗಳೂರು: ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಪೊಲೀಸ್‌ ಆಯುಕ್ತರ ಸಭೆ

ಮಂಗಳೂರು: ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಪೊಲೀಸ್‌ ಆಯುಕ್ತರ ಸಭೆ

spot_img
- Advertisement -
- Advertisement -

ಮಂಗಳೂರು: ಅಪಪ್ರಚಾರದ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದ ಮೇಲೂ ನಿಗಾ ಇಟ್ಟಿದ್ದೇವೆ. ಫೇಕ್ ಐಡಿಗಳಿಂದ ಪೋಸ್ಟ್ ಹಾಕುವಂತದ್ದು ನಡೆಯುತ್ತಿದೆ. ಇದರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ನಗರ ಪೊಲೀಸ್‌ ಆಯಕ್ತ ಎನ್‌ ಶಶಿಕುಮಾರ್‌ ಹೇಳಿದ್ದಾರೆ.

ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮುಸ್ಲಿಂ ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು, ಅಪಪ್ರಚಾರದ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಎಲ್ಲಾ ಠಾಣೆ ವ್ಯಾಪ್ತಿಯ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಲಾಗಿದೆ. ಪ್ರವಾದಿಯವರಿಗೆ ನಿಂದನೆ ಮಾಡಿದ್ರು ಎಂಬ ಹಿನ್ನೆಲೆಯಲ್ಲಿ ಮೆಸೇಜ್ ವೈರಲ್ ಆಗ್ತಿತ್ತು. ಸಮಾಜದ ಶಾಂತಿ ಹಾಳು ಮಾಡಲು, ಭಾವನೆಗಳನ್ನು ಕೆರಳಿಸುವ ಪ್ರಯತ್ನ ನಡೆದಿತ್ತು. ವೈಯಕ್ತಿಕ ಹಿತಾಸಕ್ತಿ ಪೂರೈಸಲು ಮುಂದಾಗಿರುವ ಯಾರಿಗೂ ಸೊಪ್ಪು ಹಾಕಬಾರದು ಎಂದು ಹೇಳಲಾಗಿದೆ ಎಂದರು.

ಯಾವುದೇ ಉಹಾಪೋಹಗಳಿಗೆ ಸ್ಪಂದಿಸಬಾರದು. ಸದ್ಯ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲು ಸಭೆ ಮಾಡಿದ್ದೇವೆ. ‌ಇನ್ನು ಈ ಸಭೆಯಲ್ಲಿ ಭಾಗವಹಿಸಿದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲಾ ಧರ್ಮದ ಮುಖಂಡರು, ಜನಪ್ರತಿನಿಧಿಗಳ ಸಭೆ ನಡೆಸುವಂತೆ ಮನವಿ ಮಾಡಿದ್ದಾರೆ. ನಾವು ಯಾವುದೇ ಪ್ರತಿಭಟನೆಯ ಪ್ಲ್ಯಾನ್ ಮಾಡಿಲ್ಲ ಎಂದು ಹೇಳಿದ್ದಾರೆ. ಆಂತರಿಕ ವಲಯದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಮೆಸೇಜ್ ಬಂದಾಗ ತಿಳಿಸಬೇಕು ಎಂದು ಸೂಚಿಸಲಾಗಿದೆ. ಶಾಂತಿ ಕಾಪಾಡುವುದಕ್ಕೆ ಪೊಲೀಸ್ ಇಲಾಖೆ ಜೊತೆ ಸಹಕರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!