Monday, September 28, 2026
Homeಕರಾವಳಿಉಡುಪಿಕಾರ್ಕಳ;ನಂದಳಿಕೆ ಶ್ರೀಕಾಂತ್ ಭಟ್ ಅವರ ಕಂಬಳದ ಕೋಣ ಮುದ್ದಿನ ‘ಪಾಂಡು’ ಇನ್ನಿಲ್ಲ

ಕಾರ್ಕಳ;ನಂದಳಿಕೆ ಶ್ರೀಕಾಂತ್ ಭಟ್ ಅವರ ಕಂಬಳದ ಕೋಣ ಮುದ್ದಿನ ‘ಪಾಂಡು’ ಇನ್ನಿಲ್ಲ

- Advertisement -
- Advertisement -

ಕಾರ್ಕಳ: ಜೋಡುಕರೆ ಕಂಬಳದ ಇತಿಹಾಸದಲ್ಲೇ ಅತಿ ಹೆಚ್ಚು ಪದಕ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದ, ನಂದಳಿಕೆ ಶ್ರೀಕಾಂತ್ ಭಟ್ ಅವರ ಮುದ್ದಿನ ‘ಪಾಂಡು’ ಕೋಣ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ (ಸೆ. 28) ಇಹಲೋಕ ತ್ಯಜಿಸಿದೆ.

ಎಡ ಮತ್ತು ಬಲ ಎರಡೂ ಬದಿಯಲ್ಲೂ ಓಡುವ ವಿಶಿಷ್ಟ ಪ್ರತಿಭೆ ಹೊಂದಿದ್ದ ಪಾಂಡು, ಕಂಬಳ ಕರೆಗಳಲ್ಲಿ ಒಟ್ಟು 203 ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಸಾಧನೆ  ಮಾಡಿತ್ತು. ಅತ್ತೂರು ಕಾಟಿ, ಚಾಂಪಿಯನ್ ಕುಟ್ಟಿ ಹಾಗೂ ಕೊಳಚೂರು ಚೆನ್ನ ಮುಂತಾದ ಹೆಸರಾಂತ ಕೋಣಗಳ ಜೊತೆಗೂಡಿ ಹಲವಾರು ಸ್ವರ್ಣ ಪದಕಗಳನ್ನು ತನ್ನದಾಗಿಸಿಕೊಂಡಿತ್ತು.

ಆರಂಭದಲ್ಲಿ ಅತ್ತೂರು ಮನ್ಮಥ ಜೆ. ಶೆಟ್ಟಿ ಹಾಗೂ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರ ಬಳಿಯಿದ್ದ ಈ ಕೋಣ, ನಂತರ ನಂದಳಿಕೆ ಶ್ರೀಕಾಂತ್ ಭಟ್ ಅವರ ಹಟ್ಟಿ ಸೇರಿತ್ತು. ‘ಪಾಪಾ ಪಾಂಡು’ ಧಾರಾವಾಹಿ ಜನಪ್ರಿಯವಾಗಿದ್ದ ಸಮಯದಲ್ಲಿ ಜನಿಸಿದ್ದರಿಂದ ಇದಕ್ಕೆ ‘ಪಾಂಡು’ ಎಂದು ಹೆಸರಿಡಲಾಗಿತ್ತು. ಕಳೆದ ಬೆಂಗಳೂರು ಕಂಬಳದ ಬಳಿಕ ಈ ಕೋಣ ವಿಶ್ರಾಂತಿಯಲ್ಲಿತ್ತು. ಪಾಂಡುವಿನ ಅಗಲಿಕೆಗೆ ಕಂಬಳ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!