Monday, September 28, 2026
Homeಕರಾವಳಿದ.ಕ ಕಡಲ ತೀರಕ್ಕೆ ದೈತ್ಯ ಅಲೆಗಳ ಭೀತಿ; INCOIS ನಿಂದ ಮುನ್ನೆಚ್ಚರಿಕೆ

ದ.ಕ ಕಡಲ ತೀರಕ್ಕೆ ದೈತ್ಯ ಅಲೆಗಳ ಭೀತಿ; INCOIS ನಿಂದ ಮುನ್ನೆಚ್ಚರಿಕೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಮಂಗಳೂರುವರೆಗಿನ ಕರಾವಳಿ ಪ್ರದೇಶದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ಸೆ. 27ರ ಸಂಜೆ 5.30ರಿಂದ ಸೆ. 29ರ ರಾತ್ರಿ 11.30ರವರೆಗೆ ಸಮುದ್ರದಲ್ಲಿ 0.8ರಿಂದ 1.1 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಅಲೆಗಳ ಅವಧಿ 16ರಿಂದ 18 ಸೆಕೆಂಡುಗಳವರೆಗೆ ಇರಲಿದೆ ಎಂದು INCOIS ಅಂದಾಜಿಸಿದೆ.

ಈ ಹಿನ್ನೆಲೆಯಲ್ಲಿ ಕಡಲ ನೀರು ದಿಢೀರ್‌ ದಡಕ್ಕೆ ನುಗ್ಗುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ದೋಣಿ ಚಾಲಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಕಡಲತೀರದಲ್ಲಿ ಮುನ್ನೆಚ್ಚರಿಕೆ ವಹಿಸಿ, ಸಮುದ್ರಕ್ಕೆ ಇಳಿಯದಂತೆ ಆಡಳಿತ ಮತ್ತು ಹವಾಮಾನ ಇಲಾಖೆ ಮನವಿ ಮಾಡಿದೆ.

- Advertisement -

Latest News

error: Content is protected !!