- Advertisement -
- Advertisement -
ಕಾರ್ಕಳ, ಮೇ 3: ಇರ್ವತ್ತೂರು ಗ್ರಾಮದ ಹೊಸಮಾರು ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳಕ್ಕೆ ಅಬಕಾರಿ ನೀರೀಕ್ಷಕರು ಹಾಗೂ ಕಾರ್ಕಳ ಪೊಲೀಸರು ಮೇ 2ರಂದು ರಾತ್ರಿ ವೇಳೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿ ಸಾಧು ಪೂಜಾರಿ ಎಂಬವರು ಪರಾರಿಯಾಗಿದ್ದಾರೆ. ಈತ ತನ್ನ ಮನೆಯ ಬಳಿ ಹಾಡಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿ ಸುತ್ತಿದ್ದ ಬಗ್ಗೆ ಮಾಹಿತಿಯಂತೆ ಈ ದಾಳಿ ನಡೆಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -