ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ 28 ವಿಶ್ವ ವಿದ್ಯಾನಿಲಯಗಳು ಇದ್ದಾವೆ. ಇದೀಗ ಈ ಪಟ್ಟಿಗೆ ರಾಯಚೂರು ವಿಶ್ವವಿದ್ಯಾಲಯವೊಂದು ಸೇರ್ಪಡೆಗೊಳ್ಳುವ ಮೂಲಕ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ 29ಕ್ಕೆ ಏರಿಕೆಯಾಗಿದೆ. ಇಂದ ಹೊಸ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ನೂತನವಾಗಿ ರಾಯಚೂರು ವಿಶ್ವವಿದ್ಯಾಲಯ ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಗುಲ್ಬರ್ಗ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದಂತ ಯಾದಗಿರಿ ಮತ್ತು ರಾಯಚೂರು ಒಟ್ಟಿಗೆ ಸೇರಿಸಿ ಹೊಸ ವಿಶ್ವ ವಿದ್ಯಾಲಯ ಅಸ್ತಿತ್ವದ 2020ರ ನಿಯಮದ ಅಡಿ ಹೊಸ ವಿವಿ ರಚನೆ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಇಂತಹ ನೂತನ ವಿಶ್ವವಿದ್ಯಾಲಯ ಅಸ್ತಿತ್ವದ ಕಡತವನ್ನು ರಾಜ್ಯಪಾಲ ವಜುಬಾಯಿ ವಾಲಾ ಅವರ ಅಂಕಿತಕ್ಕೆ ರಾಜ್ಯ ಸರ್ಕಾರ ಕಳುಹಿಸಿ ಕೊಡಲಾಗಿತ್ತು.
ಇದೀಗ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿದಂತ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯನ್ನು ಒಟ್ಟುಗೂಡಿಸಿದ ರಾಯಚೂರು ನೂತನ ವಿಶ್ವವಿದ್ಯಾಲಯ ಕಡತಕ್ಕೆ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕುವ ಮೂಲಕ, ರಾಯಚೂರು ವಿಶ್ವವಿದ್ಯಾಲಯವನ್ನು ರಾಜ್ಯಪಾಲರು ಅಧಿಕೃತವಾಗಿ ವಿಶ್ವವಿದ್ಯಾಲಯವಾಗಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ರಾಯಚೂರು ನೂತನ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ.
ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ ಈ ಕೆಳಗಿನಂತಿದೆ
- ಬೆಂಗಳೂರು ವಿಶ್ವವಿದ್ಯಾಲಯ
- ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ
- ಬೆಂಗಳೂರು ನಾರ್ಥ್ ಯುನಿವರ್ಸಿಟಿ
- ದಾವಣಗೆರೆ ವಿಶ್ವವಿದ್ಯಾಲಯ
- ಗುಲ್ಬರ್ಗಾ ವಿಶ್ವವಿದ್ಯಾಲಯ
- ಕನ್ನಡ ವಿಶ್ವವಿದ್ಯಾಲಯ
- ಕರ್ನಾಟಕ ವಿಶ್ವವಿದ್ಯಾಲಯ
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
- ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
- ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯುನಿವರ್ಸಿಟಿ
- ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ
- ಕರ್ನಾಟಕ ವೆಟರ್ನರಿ, ಅನಿಮಲ್ ಮತ್ತು ಫಿಷರೀಸ್ ಸೈನ್ಸ್ ಯುನಿವರ್ಸಿಟಿ
- ಕುವೆಂಪು ವಿಶ್ವವಿದ್ಯಾಲಯ
- ಮಂಗಳೂರು ವಿಶ್ವವಿದ್ಯಾಲಯ
- ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
- ತುಮಕೂರು ವಿಶ್ವವಿದ್ಯಾಲಯ
- ಬೆಂಗಳೂರು ಅಗ್ರಿಕಲ್ಚರ್ ಯುನಿವರ್ಸಿಟಿ
- ಧಾರವಾಡ ಅಗ್ರಿಕಲ್ಚರ್ ಯುನಿವರ್ಸಿಟಿ
- ರಾಯಚೂರು ಅಗ್ರಿಕಲ್ಚರ್ ಯುನಿವರ್ಸಿಟಿ
- ಬಾಗಲಕೋಟೆ ಅಗ್ರಿಕಲ್ಚರ್ ಯುನಿವರ್ಸಿಟಿ
- ಶಿವಮೊಗ್ಗ ಅಗ್ರಿಕಲ್ಚರ್ ಯುನಿವರ್ಸಿಟಿ
- ಮೈಸೂರು ವಿಶ್ವವಿದ್ಯಾಲಯ
- ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ
- ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ
- ರಾಯಚೂರು ವಿಶ್ವವಿದ್ಯಾಲಯ(ನೂತನ ವಿವಿ)