ಬೆಳ್ತಂಗಡಿ : ದೇಶದೆಲ್ಲೆಡೆ ಕೊರೊನ ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ . ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಅರ್ಹ ಮರಾಟಿ ಸಮುದಾಯದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ಗ್ರಾಮಸಮಿತಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಯುವ ಮರಾಟಿ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಅವರ ಲೈಲಾ ಸ್ವ-ಗೃಹದಲ್ಲಿ ಸಂಘದ ವತಿಯಿಂದ ನಡೆಯಿತು .
ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಸೌಮ್ಯಲತಾ ಎನ್. ಸಂತೋಷ್ ಕುಮಾರ್ ಆಹಾರ ಕಿಟ್ ಗಳನ್ನು ಗ್ರಾಮಸಮಿತಿಗಳ ಪದಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಫಲಾನುಭವಿಗಳಿಗೆ ಕಿಟ್ ಹಸ್ತಾಂತರಿಸುವ ಸಂದರ್ಭದಲ್ಲಿ ಗ್ರಾಮ ಸಮಿತಿಯವರು ಛಾಯಾಚಿತ್ರ ತೆಗೆಯಬಾರದು, ಕಿಟ್ ವಿತರಣೆ ನೆಪದಲ್ಲಿ ಅನಗತ್ಯ ತಿರುಗಾಟ ಮಾಡಬಾರದು, ಕಿಟ್ ವಿತರಣೆ ಮಾಡುವವರು ಮಾತ್ರ ತೆರಳಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಂತೋಷ್ ಕುಮಾರ್ ಸೂಚನೆ ನೀಡಿದರು .
ವಿವಿಧ ಆಹಾರ ಸಾಮಗ್ರಿಗಳನ್ನು ಒಳಗೊಂಡ 20 ಕಿಟ್ ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಸಾದ್ ನಾಯಕ್ ಕುವೆಟ್ಟು, ಕೋಶಾಧಿಕಾರಿ ಪ್ರಜ್ವಲ್ ಕಣಿಯೂರು, ಕಾರ್ಯಕಾರಿ ಸಮಿತಿ ಸದಸ್ಯ ಶರತ್ ಕಣಿಯೂರು, ಲೈಲಾ ಗ್ರಾಮ ಸಮಿತಿ ಅಧ್ಯಕ್ಷರಾದ ಹರೀಶ್ ನಾಯ್ಕ ರಾಘವೇಂದ್ರ ನಗರ ಬಡಕೋಡಿ, ಕಾಶಿಪಟ್ಣ ಗ್ರಾಮ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಹರೀಶ್ ನಾಯ್ಕ ಕಾಶಿಪಟ್ಣ, ಕಣಿಯೂರು ಗ್ರಾಮ ಸಮಿತಿಯ ಕ್ರೀಡಾ ಕಾರ್ಯದರ್ಶಿಯಾದ ರೋಹಿತ್ ನಾಯ್ಕ , ಗಣೇಶ ನಾಯ್ಕ ಕಕ್ಕೆನಾ, ಗಣೇಶ್ ಎಂ ಲೈಲಾ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಯುವ ಮರಾಟಿ ಸೇವಾ ಸಂಘ : ಕಿಟ್ ವಿತರಣೆ
- Advertisement -
- Advertisement -
- Advertisement -
