- Advertisement -
- Advertisement -
ಸುಳ್ಯಮೇ.೦೩: ಇಂದು ರಾತ್ರಿ ಸುರಿದ ಗಾಳಿ ಮಳೆಗೆ ತಾಲೂಕಿನ ಹಲವಾರು ಕಡೆ ಮನೆಗಳಿಗರ ಹಾನಿಯಾಗಿದ್ದು, ಸುಳ್ಯ ಹೊಸಗದ್ದೆ ಬಳಿಯ ಅಯ್ಯಪ್ಪ ಗುಡಿ ಸಮೀಪದ ನಿವಾಸಿ ಲೂಸಿ ಡಿಸೋಜಾ ಎಂಬವರ ಮನೆಯ ಮಾಡಿಗೆ ಮಾವಿನ ಮರದ ಬೃಹತ್ ಗೆಲ್ಲು ಮುರಿದು ಬಿದ್ದು ಮೇಲ್ಛಾವಣಿ ಪೂರ್ಣ ಹಾನಿಗೊಂಡಿದೆ.
ಜಯನಗರದಲ್ಲಿ ಗುಲಾಬಿ ಆನಂದ ಎಂಬವರ ಮನೆಯ ಶೀಟ್ ಹಾರಿ ಹೋಗಿದ್ದು, ಮಳೆ ನೀರು ಮನೆಯೊಳಗೆ ಬಂದು ಬಟ್ಟೆ ಬರೆಗಳೆಲ್ಲ ಒದ್ದೆಯಾಗಿದೆ. ಜಯನಗರ ಉಮೇಶ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಹಾಗೂ ತೆಂಗಿನ ಮರ ಮುರಿದು ಬಿದ್ದು ತೀವ್ರ ಹಾನಿಯಾಗಿದೆ. ನಾರಾಯಣ ಮಣಿಯಾಣಿ ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಜಯನಗರದಲ್ಲಿ ಸಾರ್ವಜನಿಕ ದಾರಿದೀಪ ಅಳವಡಿಸಿದ್ದ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದು ಜಯನಗರದಲ್ಲಿ ಕತ್ತಲಾವರಿಸಿದೆ. ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್ ಅವರು ರಾತ್ರಿಯೇ ಎಲ್ಲಾ ಕಡೆ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

- Advertisement -