Sunday, May 19, 2024
Homeತಾಜಾ ಸುದ್ದಿಕಾರ್ಕಳದ ಮಕ್ಕಳ ಈ ಫೆವರೇಟ್ ಟೀಚರ್ ಈಗ ಫುಲ್ ಫೇಮಸ್...

ಕಾರ್ಕಳದ ಮಕ್ಕಳ ಈ ಫೆವರೇಟ್ ಟೀಚರ್ ಈಗ ಫುಲ್ ಫೇಮಸ್…

spot_img
- Advertisement -
- Advertisement -

ಬೆಂಗಳೂರು : ಶಾಲೆ ಅನ್ನೋದು ಪ್ರತಿಯೊಂದು ಮಗುವಿನ ಭವಿಷ್ಯಕ್ಕೆ ಅಡಿಪಾಯ ಹಾಕೋ ದೇವಾಲಯವಿದ್ದಂತೆ. ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು, ಶಿಕ್ಷಕರ ಮೇಲೆ ಭರವಸೆಯಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಹಾಗಾಗಿ ಶಿಕ್ಷಕರ ಜವಬ್ದಾರಿ ಅಷ್ಟಿಷ್ಟಲ್ಲ. ಒಬ್ಬ ಶಿಕ್ಷಕ ಮಕ್ಕಳಿಗೆ ಕೇವಲ ಪಠ್ಯ ವಿಚಾರಗಳನ್ನೇ ಹೇಳಿಕೊಟ್ಟರಷ್ಟೇ ಸಾಲದು. ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲಾ ಪೂರಕ ವಾತಾವರಣವನ್ನು ಆತ ಕಲ್ಪಿಸಿಕೊಡಬೇಕು. ಪಾಠದ ಜೊತೆ ಆಟವಿದ್ದರಷ್ಟೇ ಮಕ್ಕಳು ಖುಷಿ ಖುಷಿಯಿಂದ ಕಲಿಯುತ್ತಾರೆ. ಶಾಲೆಗೆ ಬರುತ್ತಾರೆ.

ಅದರಲ್ಲೂ ಈಗ ಕೊರೊನಾದಿಂದ ಮಕ್ಕಳೆಲ್ಲಾ ಮನೆಯಲ್ಲೇ ಉಳಿದಿದ್ದಾರೆ. ಹೆತ್ತವರಿಗೆ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳೋದೇ ತಲೆ ನೋವು. ಆನ್ ಲೈನ್ ಕ್ಲಾಸ್ ಗಳಿದ್ದರೂ ಮಕ್ಕಳನ್ನು ಅದರಲ್ಲಿ ತೊಡಗಿಕೊಳ್ಳುವಂತೆ ಮಾಡೋದು ಬಹು ದೊಡ್ಡ ಛಾಲೆಂಜ್. ಇಂತಹ ಹೆತ್ತವರ ತಲೆಬಿಸಿಗೆ ಪರಿಹಾರವೊಂದನ್ನು ಕೊಟ್ಟಿದ್ದಾರೆ ಕಾರ್ಕಳದ ಈ ಶಿಕ್ಷಕಿ. ಅಂದ್ಹಾಗೆ ಇವರ ಹೆಸರು ವಂದನಾ ರೈ. ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿನ ಶಿಕ್ಷಕಿಯಾಗಿರುವ ಇವರು ಚಂದಿರನೇತಕೆ ಓಡುವನಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಇದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಮಕ್ಕಳು ಮನೆಯಲ್ಲಿ ಉಳಿದುಕೊಂಡು ಕಲಿಯಲಿ ಎಂದು ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಶಿಕ್ಷಕಿ ವಂದನಾ ಅವರ ಈ ಡ್ಯಾನ್ಸ್ ವಿಡಿಯೋ ಸಾಕಷ್ಟು ಚಿಣ್ಣರ ಮನ ಕದ್ದಿದ್ದು ಫುಲ್ ವೈರಲ್ ಆಗಿದೆ. ಅವರ ಅಭಿನಯ, ಎಕ್ಸ್ ಪ್ರೆಶನ್ ಎಲ್ಲರೂ ಫಿದಾ ಆಗಿದ್ದು ಲಕ್ಷಗಟ್ಟಲೇ ವ್ಯೂವ್ಸ್ ಪಡೆದಿಕೊಂಡಿದೆ. ಕಲೆಯಲ್ಲಿ ಸಾಕಷ್ಟು ಆಸಕ್ತಿ ಇರುವ ಶಿಕ್ಷಕಿ ವಂದನಾ ಯಕ್ಷಗಾನ ಕಲಾವಿದೆಯೂ ಹೌದು.. ಬಾಲ್ಯದಿಂದಲೂ ಸಂಗೀತ, ನೃತ್ಯದಲ್ಲಿ ಬೆಳೆಸಿಕೊಂಡಿರುವ ವಂದನಾ ಅದನ್ನು ವಿದ್ಯಾರ್ಥಿಗಳಿಗೂ ಹಂಚುತ್ತಿದ್ದಾರೆ. ಇದೀಗ ಈ ವೈರಲ್ ವಿಡಿಯೋದ ಮೂಲಕ ವಂದನಾ ಎಲ್ಲರಿಗೂ ಫೆವರೇಟ್ ಟೀಚರ್ ಆಗಿದ್ದಾರೆ.

ಜೊಕುಲೆಗ್ ಪಾಠ ಮಲ್ಪುನಗ ನಲಿಕೆದೊಟ್ಟುಗ್ ಕಲ್ಪಾದು ಕೊರ್ಪಿನ ತುಲುನಾಡ್ಡ…ಕಾರ್ಲ ಪನ್ಪಿ ಊರುದ.. ಪೆರ್ಮೆದ ಮಗಲ್..#ವಂದನಾ_ರೈ….ಮೇರ್ ಜೆಸಿಸಿ ಆಂಗ್ಲ ಮಾದ್ಯಮ ಶಾಲೆದ #ಕಲ್ಪಾದಕಿ ಯಾದುಲ್ಲೆರ್..ಮೇರೆನ ಅಮ್ಮ ಮಸ್ತು ಪಾರ್ಧನ ಪನ್ಪೆರ್……ತುಲುನಾಡ್ಡ ನಮ್ಮ #ಪರಪೋಕು #ಪರಿತಿರಿ ಓರಿಪಾವೆರೆ ಮೊಕ್ಲೆಂಚಿನಕ್ಲೆಡ್ಡು ಸಾದ್ಯ…*☀#ಜೈ_ತುಲುನಾಡ್_ಜೈ_ತುಲುವಪ್ಪೆ..?

Posted by ಪ್ರಕಾಶ್ ಶೆಟ್ಟಿ ತುಲುವೆ on Tuesday, 14 July 2020

- Advertisement -
spot_img

Latest News

error: Content is protected !!