Monday, May 20, 2024
Homeತಾಜಾ ಸುದ್ದಿಕೊರೊನಾ ಸೋಂಕಿತ ದಂಪತಿಯ ಮಗುವಿಗೆ ಅಮ್ಮನಾದ ಮಹಾತಾಯಿ ಈ ವೈದ್ಯೆ..

ಕೊರೊನಾ ಸೋಂಕಿತ ದಂಪತಿಯ ಮಗುವಿಗೆ ಅಮ್ಮನಾದ ಮಹಾತಾಯಿ ಈ ವೈದ್ಯೆ..

spot_img
- Advertisement -
- Advertisement -

ಕೊಚ್ಚಿ:  ಕೊರೊನಾ ಅನ್ನೋ ಹೆಮ್ಮಾರಿ ಮಾಡುತ್ತಿರುವ ಅವಾಂತರ ಒಂದೆರಡಲ್ಲ. ಒಂದುಕಡೆ ನಮ್ಮರನ್ನೇ ನಮ್ಮಿಂದ ಕೊರೊನಾ ದೂರ ಮಾಡುತ್ತಿದ್ದರೆ, ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಯಾರು ಇಲ್ಲದವರಂತೆ ಒಬ್ಬಂಟಿಯಾಗಿ ಕಾಲ ಕಳೆಯುತ್ತಿರುವ ಕೊರೊನಾ ಸೋಂಕಿತರಿಗೆ ಅಲ್ಲಿರುವ ವೈದ್ಯರು, ನರ್ಸ್ ಗಳೇ ಆಪ್ತರಾಗುತ್ತಿದ್ದಾರೆ. ಅವರೇ ಮನೆಯವರಂತೆ ಸೋಂಕಿತರನ್ನು ಮನೆಯವರಂತೆ ನೋಡಿಕೊಳ್ಳುತ್ತಾರೆ. ಅವರ ಸೇವೆಗೆ ಯಾವತ್ತೂ ಬೆಲೆ ಕಟ್ಟಲಾಗದು.

ಹೀಗಿರುವಾಗ ಗ ಕೇರಳದಲ್ಲಿ ಒಂದು ಮನ ಮಿಡಿಯುವ ಘಟನೆ ನಡೆದಿದೆ. ಕೊರೊನಾ ಸೋಂಕಿಗೆ ಒಳಗಾದ ದಂಪತಿಯ ಆರು ತಿಂಗಳ ಮಗುವನ್ನು ಕಳೆದ ಒಂದು ತಿಂಗಳಿಂದ ವೈದ್ಯೆಯೊಬ್ಬರು ನೋಡಿಕೊಂಡಿದ್ದಾರೆ. ಅಂದ್ಹಾಗೆ ಆ ವೈದ್ಯೆಯ ಹೆಸರು ಡಾ.ಮೇರಿ ಅನಿತಾ.ಈ ಮಗುವಿನ ತಾಯಿ ಕೊಚ್ಚಿಯವರು. ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಮಗುವಿನ ಅಪ್ಪ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಮಗುವಿನ ಅಪ್ಪನಿಗೆ ಕೊರೊನಾ ಸೋಂಕು ತಗುಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಗುವಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮಗುವನ್ನು ಕರೆದುಕೊಂಡು ಮಹಿಳೆ ಕೊಚ್ಚಿಯ ತಮ್ಮ ಮನೆಗೆ ಬಂದು ಕ್ವಾರಂಟೈನ್‌ನಲ್ಲಿ ಇದ್ದರು. ಆದರೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದಾಗ ಅವರಿಗೂ ಸೋಂಕು ದೃಢಪಟ್ಟಿತು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆದರೆ ಇವರಿಗೆ ಆಸ್ಪತ್ರೆಗೆ ದಾಖಲಾಗುವುದು ಕಡ್ಡಾಯ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಅನಿವಾರ್ಯವಾಗಿ ಅವರು ದಾಖಲಾಗಲೇಬೇಕಿತ್ತು. ತಮ್ಮ ಆರು ತಿಂಗಳ ಕಂದನ ಜತೆ ಆಸ್ಪತ್ರೆಗೆ ಹೋದರು. ಅಪ್ಪ-ಅಮ್ಮ ಇಬ್ಬರಿಗೂ ಸೋಂಕು ತಗುಲಿದಾಗ ಮಗುವನ್ನು ಮುಟ್ಟಲೂ ಹಿಂದೇಟು ಹಾಕುವ ಭಯಾನಕ ಸ್ಥಿತಿ ಇಂದಿನದ್ದು. ಯಾರೂ ಮಗುವನ್ನು ನೋಡಿಕೊಳ್ಳಲು ಮುಂದೆ ಬರಲಿಲ್ಲ.

ಅಂಥದ್ದರಲ್ಲಿ ವೈದ್ಯೆಯಾಗಿರುವ ಮೇರಿ ಅನಿತಾ ಅವರು ಕಳೆದೊಂದು ತಿಂಗಳಿನಿಂದ ಮಗುವನ್ನು ತಾವೇ ನೋಡಿಕೊಂಡಿದ್ದಾರೆ. ಈ ಅವಧಿಯಲ್ಲಿ ವಿಡಿಯೋ ಕಾಲ್‌ ಮೂಲಕ ಅಪ್ಪ-ಅಮ್ಮ ಇಬ್ಬರಿಗೂ ದಿನವೂ ಮಗುವನ್ನು ತೋರಿಸಿ ಮಾತನಾಡಿಸಿದ್ದಾರೆ. ಇದೀಗ ಮಗವಿನ ಅಮ್ಮ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ವೈದ್ಯೆಗೆ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ಮನೋರೋಗ ತಜ್ಞೆಯಾಗಿರುವ ಡಾ.ಮೇರಿ ಅನಿತಾ ಅವರು ಬುದ್ಧಿಮಾಂದ್ಯ ಮಕ್ಕಳ ಸಂಸ್ಥೆಯೊಂದನ್ನೂ ನಡೆಸುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರ ಪಾಡು ಕೇಳೋರಿಲ್ಲ ಅನ್ನೋ ಆರೋಪಗಳ ಮಧ್ಯೆ ಇಂತಹ ವೈದ್ಯರು ಮಾಡುತ್ತಿರುವ ಕಾರ್ಯ ನಿಜಕ್ಕೂ ಮೆಚ್ಚವಂತಹದ್ದು..

- Advertisement -
spot_img

Latest News

error: Content is protected !!