Friday, April 26, 2024
HomeUncategorizedಮಾರ್ಚ್ 10 ರಿಂದ ಹತ್ತು ದಿನಗಳ ಕಾಲ ಕಾರ್ಕಳ ಉತ್ಸವ

ಮಾರ್ಚ್ 10 ರಿಂದ ಹತ್ತು ದಿನಗಳ ಕಾಲ ಕಾರ್ಕಳ ಉತ್ಸವ

spot_img
- Advertisement -
- Advertisement -

ಕಾರ್ಕಳ: ಉಡುಪಿ‌ ಜಿಲ್ಲೆಯ ಕಾರ್ಕಳದಲ್ಲಿ ಮಾರ್ಚ್ 10 ರಿಂದ 20ರವರೆಗೆ ಕಾರ್ಕಳ ಉತ್ಸವ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಕಳ ಉತ್ಸವ ನಡೆಯಲಿದೆ.

ಜಸ್ಟೀಸ್ ಕೆ.ಎಸ್. ಹೆಗ್ಡೆ ವೇದಿಕೆ, ಗೋಪಾಲ ಭಂಡಾರಿ ವೇದಿಕೆ ಮತ್ತು ರೆಂಜಾಳ ಗೋಪಾಲಕೃಷ್ಣ ಶೆಣೈ ವೇದಿಕೆಗಳಲ್ಲಿ 10 ದಿನಗಳ ಕಾಲ ಉತ್ಸವ ಜರುಗಲಿದೆ.

ಲೋಕಸಭೆ ಮಾಜಿ ಸ್ಪೀಕರ್ ದಿ. ಜಸ್ಟೀಸ್ ಕೆ.ಎಸ್. ಹೆಗ್ಡೆ ಹೆಸರನ್ನು ಸ್ವರಾಜ್ ಮೈದಾನದಲ್ಲಿನ ವೇದಿಕೆಗೆ ಇಡಲಾಗಿದೆ. ಈ ವೇದಿಕೆಯಲ್ಲಿ ಉತ್ಸವದ ಕೊನೆಯ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ರಾಜ್ಯದ ಪ್ರಸಿದ್ಧ ಕಲಾವಿದರ ಉಪಸ್ಥಿತಿಯಲ್ಲಿ ಸಂಗಮಗೊಳ್ಳಲಿದೆ.

ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಹೆಸರನ್ನು ಗಾಂಧಿ ಮೈದಾನದ ವೇದಿಕೆಗೆ ಇಡಲಾಗಿದೆ. ಈ ವೇದಿಕೆಯಲ್ಲಿ ಮಾರ್ಚ್ 10 ರಂದು ಉತ್ಸವ ಉದ್ಘಾಟನೆಯಿಂದ ಮೊದಲ್ಗೊಂಡು ಏಳು ದಿನಗಳ ಕಾಲ ಕನ್ನಡ, ತುಳು, ಕೊಂಕಣಿ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮಗಳು ನಡೆಯಲಿವೆ.

ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿ ಕೆತ್ತಿದ ಶಿಲ್ಪಿ ದಿ‌. ರೆಂಜಾಳ ಗೋಪಾಲಕೃಷ್ಣ ಅವರ ಹೆಸರನ್ನು ವಸ್ತು ಪ್ರದರ್ಶನದ ಒಂದು ಭಾಗಕ್ಕೆ ಇಡಲಾಗಿದೆ. ಚಿತ್ರಕಲೆ ಮತ್ತು ಶಿಲ್ಪಕಲೆಯ ವಿವಿಧ ಪ್ರದರ್ಶನಗಳು ಬೇರೆ ಬೇರೆ ರಾಜ್ಯಗಳ ವಿಶೇಷ ಕಲೆಗಳು ಇಲ್ಲಿ ಅನಾವರಣಗೊಳ್ಳಲಿದೆ.

ಕಾರ್ಕಳ ಶಾಸಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹತ್ತು ದಿನಗಳ ಕಾಲ ಕಾರ್ಕಳ ಉತ್ಸವ ಆಯೋಜಿಸಿದ್ದಾರೆ.

- Advertisement -
spot_img

Latest News

error: Content is protected !!