Thursday, June 4, 2026
Homeತಾಜಾ ಸುದ್ದಿಪ್ರಿಯತಮೆಯಿಂದ ಪ್ರಿಯಕರನ ಬರ್ಬರ ಕೊಲೆ !

ಪ್ರಿಯತಮೆಯಿಂದ ಪ್ರಿಯಕರನ ಬರ್ಬರ ಕೊಲೆ !

- Advertisement -
- Advertisement -

ಲಕ್ನೋ: ಆಘಾತಕಾರಿ ಪ್ರಕರಣವೊಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಕೊಂದಿದ್ದಾಳೆ. ಈ ಕೊಲೆಯಲ್ಲಿ ಆರೋಪಿ ಮಹಿಳೆಯ ಕುಟುಂಬದವರೂ ಶಾಮೀಲಾಗಿದ್ದಾರೆ.

ಈ ಪ್ರಕರಣ ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿ ಗ್ರಾಮದ್ದು. ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿ ಗ್ರಾಮದ ನಿವಾಸಿ ರಾಬಿನ್‌ನನ್ನು ಕೊಂದು ಶವವನ್ನು ಕಾಲುವೆಗೆ ಎಸೆಯಲಾಗಿತ್ತು. ಮೃತನನ್ನು ಆರೋಪಿ ಗೆಳತಿ ಮೋನಿಕಾ ಮತ್ತು ಆಕೆಯ ತಾಯಿ ಅಂಜು ಯಾವುದೋ ಕೆಲಸದ ನೆಪದಲ್ಲಿ ಮೊದಲು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಬಳಿಕ ಅಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತ ರಾಬಿನ್ ಶವವನ್ನು ಆರೋಪಿ ಗೆಳತಿಯ ಸಹೋದರರು ಕಾಲುವೆಗೆ ಎಸೆದಿದ್ದಾರೆ.

- Advertisement -

Latest News

error: Content is protected !!