Sunday, April 28, 2024
Homeಕರಾವಳಿಉಡುಪಿಕಾಮನ್​ವೆಲ್ತ್ ಗೇಮ್ಸ್ನಲ್ಲಿ​ ಕನ್ನಡಿಗನ ಕಮಾಲ್:‌ ಕುಂದಾಪುರದ ಗುರುರಾಜ ಪೂಜಾರಿಗೆ ಕಂಚಿನ ಪದಕ

ಕಾಮನ್​ವೆಲ್ತ್ ಗೇಮ್ಸ್ನಲ್ಲಿ​ ಕನ್ನಡಿಗನ ಕಮಾಲ್:‌ ಕುಂದಾಪುರದ ಗುರುರಾಜ ಪೂಜಾರಿಗೆ ಕಂಚಿನ ಪದಕ

spot_img
- Advertisement -
- Advertisement -

ಕರ್ನಾಟಕದ ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಅವರು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕವನ್ನು ಗೆದ್ದುಕೊಟ್ಟಿದ್ದಾರೆ.ಕುಂದಾಪುರ ಮೂಲದ ಗುರುರಾಜ್‌ ಪೂಜಾರಿಗೆಕಾಮನ್‌ವೆಲ್ತ್ ಕ್ರೀಡಾಕೂಟ 2022ರಲ್ಲಿ ಪುರುಷರ 61 ಕೆಜಿ ವಿಭಾಗದಲ್ಲಿಕಂಚಿನ ಪದಕಸಿಕ್ಕಿದೆ. ಈ ಮೂಲಕ ಭಾರತದ ಕಾಮನ್​ವೆಲ್ತ್ ಗೇಮ್ಸ್​ನ 2ನೇ ದಿನದಂದು ಸತತ ಎರಡನೇ ಪದಕ ಗೆಲ್ಲುವಂತಾಗಿದೆ.ಹಾಗೇ ಕಂಚಿನ ಪದಕ ಗೆದ್ದಿರುವ ಗುರುರಾಜ ಪೂಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.  

ಪುರುಷರ 61 ಕೆಜಿ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಗುರುರಾಜ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 114 ಕೆಜಿ ಮತ್ತು ಎರಡನೇಯಲ್ಲಿ 118 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ, ಭಾರತೀಯ ವೇಟ್‌ಲಿಫ್ಟರ್ ಗುರುರಾಜ್ ಪೂಜಾರಿ ತಮ್ಮ ಮೂರನೇ ಪ್ರಯತ್ನದಲ್ಲಿ 151 ಕೆಜಿ ಎತ್ತುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ .

ಮಲೇಷ್ಯಾದ ಅಜ್ನಿಲ್ ಬಿನ್ ಬಿಡೀನ್ ಮುಹಮ್ಮದ್ 61 ಕೆಜಿಯ ವೇಟ್ ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು ಎರಡನೇ ಸ್ಥಾನಕ್ಕೆ ಭಾಜನರಾಗಿದ್ದರು. ಇತ್ತ ಗುರುರಾಜ್ ಪೂಜಾರಿ ಅವರಿಗೆ ಕೆನಡಾದ ಯೂರಿ ಸಿಮರ್ಡ್ ಭಾರೀ ಹಣಾಹಣಿ ನೀಡಿದರು. ಕಂಚಿನ ಪದಕಕ್ಕೆ ಹೋರಾಟ ನಡೆಯಿತು. ಆದರೆ ಕೊನೆಗೂ ನಮ್ಮ ಹೆಮ್ಮೆಯ ಕನ್ನಡಿಗ ಕುಂದಾಪುರದ ಗುರುರಾಜ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಟ್ಟರು.

- Advertisement -
spot_img

Latest News

error: Content is protected !!