Friday, June 5, 2026
Homeಕರಾವಳಿನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ಬಿಜೆಪಿ ತೆಕ್ಕೆಗೆ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ಬಿಜೆಪಿ ತೆಕ್ಕೆಗೆ

- Advertisement -
- Advertisement -

ಕಡಬ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ನ ಪ್ರಥಮ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷರಾಗಿ ಜಯಂತಿ ಆರ್.ಗೌಡರವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನೂತನ ತಾಲೂಕು ಪಂಚಾಯತ್ ನ ಆಡಳಿತ ಜವಾಬ್ದಾರಿ ಬಿಜೆಪಿ ಪಕ್ಷದ ಹೆಗಲಿಗೆ ಸೇರಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ರಾಜೇಶ್ವರಿ ಕನ್ಯಾಮಂಗಲ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗೆಯೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಗಣೇಶ್ ಕೈಕುರೆ, ಅಶೋಕ್ ನೆಕ್ರಾಜೆ ಮತ್ತು ಬಿಜೆಪಿಯ ಜಯಂತಿ ಆರ್ ಗೌಡ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನ ಇಬ್ಬರು ನಾಮಪತ್ರ ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ರಾಜೇಶ್ವರಿ ಕನ್ಯಾಮಂಗಲ, ಉಪಾಧ್ಯಕ್ಷರಾಗಿ ಜಯಂತಿ ಆರ್.ಗೌಡರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯನ್ನು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ನೇತೃತ್ವದಲ್ಲಿ ಇ.ಒ ನವೀನ್ ಭಂಡಾರಿ, ತಹಸೀಲ್ದಾರ್ ಜಾನ್ ಪ್ರಕಾಶ್ ನಡೆಸಿದರು.

- Advertisement -

Latest News

error: Content is protected !!