Saturday, June 13, 2026
Homeಕರಾವಳಿಕಡಿರುದ್ಯಾವರ: ಮಸೀದಿಯ ಶೌಚಾಲಯ ನಿರ್ಮಾಣಕ್ಕೆ ಶಿಲಾನ್ಯಾಸ

ಕಡಿರುದ್ಯಾವರ: ಮಸೀದಿಯ ಶೌಚಾಲಯ ನಿರ್ಮಾಣಕ್ಕೆ ಶಿಲಾನ್ಯಾಸ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ಮಸೀದಿಯ ಶೌಚಾಲಯದ ಶಿಲಾನ್ಯಾಸ ಕಾರ್ಯಕ್ರಮವು ಇಂದು ಅಲ್ ಹುಮ್ಮಾ ಹೆಲ್ಪ್ ಲೈನ್ ದ.ಕ ವತಿಯಿಂದ ನಡೆಯಿತು.

ಶಿಲಾನ್ಯಾಸವನ್ನು ಕಾಸರಗೋಡು ಸಯ್ಯದ್ ತಂಜಳ್ ರವರು ನೆರವೇರಿಸಿದರು. ಸ್ಥಳೀಯ ಖತೀಬರಾದ ಝಕರೀಯ ಉಸ್ತಾದ್ ರವರು ಸ್ವಾಗತಿಸಿದರು. ಸಲಹೆಗಾರರಾದ ಲತೀಫ್ ಅನೀಫ್ ಅಲ್ ಅಝರಿಯವರು ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಕೆ.ಎಂ ಅಬೂಬಕ್ಕರ್, ಅಲ್ ಹುಮ್ಮಾದ ಅಧ್ಯಕ್ಷ ಫಾರೂಕ್ ಎರ್ಮಾಳಪಲ್ಕೆ, ಗೌರವಾಧ್ಯಕ್ಷರಾದ ಉಮ್ಮರ್ ಫಾರೂಕ್ ಮದನಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!