Friday, August 21, 2026
Homeತಾಜಾ ಸುದ್ದಿಎಸ್ಸೆಸೆಲ್ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ , ಮಳೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಕ: ಸಣ್ಣ ಸಣ್ಣ ಖುಷಿಯನ್ನು...

ಎಸ್ಸೆಸೆಲ್ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ , ಮಳೆಯಲ್ಲಿ ಕುಣಿದು ಕುಪ್ಪಳಿಸಿದ ಬಾಲಕ: ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸೋದನ್ನು ಇವನಿಂದ ಕಲಿಯಬೇಕು

- Advertisement -
- Advertisement -

ಕೊಪ್ಪಳ: ನಿನ್ನೆಯಷ್ಟೇ ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಪ್ರತಿ ಬಾರಿ ಎಸ್ಸೆಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟಗೊಂಡಾಗ ದುಡುಕಿ ವಿದ್ಯಾರ್ಥಿಗಳು ಅನೇಕ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವುದನ್ನು ನೋಡಿರ್ತೀವಿ.ಆದರೆ ಇಲ್ಲೊಬ್ಬ ಯುವಕನ ಜೀವನೋತ್ಸಾಹ ನಿಜಕ್ಕೂ ಖುಷಿ ಕೊಡುತ್ತೆ.

ಕೊಪ್ಪಳ ತಾಲೂಕಿನ ಕಾತರಕಿ ನಿವಾಸಿ ಶಿವರಾಜ್ ನ ಎಸ್ಸೆಸೆಲ್ಸಿ ಫಲಿತಾಂಶ ನಿನ್ನೆಯಷ್ಟೇ ಹೊರ ಬಿದ್ದಿತ್ತು. ಆತ ಜಸ್ಟ್ ಪಾಸ್ ಆಗಿದ್ದಾನೆ. ಇದರಿಂದ ಖುಷಿಯಾದ ಆದ ಆತ ಮಳೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಪಾಸ್ ಆದ ಖುಷಿಯನ್ನು ವ್ಯಕ್ತಪಡಿಸಿದ್ದಾನೆ. 

ಪೋಷಕರು ಶಿವರಾಜ್‍ಗೆ ನೀನು ಪಾಸ್ ಆಗಲ್ಲ ಎಂದು ಹೇಳಿದ್ದರಂತೆ. ಆದರೆ ಫಲಿತಾಂಶದಲ್ಲಿ ಶಿವರಾಜ್ ಪಾಸ್ ಎಂದು ಬಂದಿದೆ. ಇದನ್ನು ನೋಡಿದ ಶಿವರಾಜ್ ಖುಷಿಗೆ ಪಾರವೇ ಇಲ್ಲದಂತಾಗಿದೆ.  ಫಲಿತಾಂಶ ನೋಡಿ ಫುಲ್ ಖುಷಿಯಾದ ಶಿವರಾಜ್ ಮಳೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ ನಾನು ಪಾಸ್ ಆದೆ ಎಂದು ಕಿರುಚಾಡಿದ್ದಾನೆ.

ಇದನ್ನು ಮನೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವೀಡಿಯೋ ಶೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಯ್ಯೋ ಒಂದು ಮಾರ್ಕ್ ಹೋಯ್ತಲ್ವಾ, ಎರಡು ಮಾರ್ಕ್ ಹೋಯ್ತಲ್ವಾ ಅಂತಾ ಕೊರಗು ವಿದ್ಯಾರ್ಥಿಗಳಿಗೆ ಲೈಫ್ ನಲ್ಲಿ ಸಿಕ್ಕಿರುವ ಅವಕಾಶದಲ್ಲೇ ಹೇಗೆ ಖುಷಿಯಾಗಿರಬೇಕು ಎಂಬುವುದನ್ನು ವಿವರಿಸಿದ್ದಾನೆ.

- Advertisement -

Latest News

error: Content is protected !!