Friday, May 17, 2024
Homeಕರಾವಳಿಉಡುಪಿಕುಂದಾಪುರ: ಸತತ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಕುಂದಾಪುರ: ಸತತ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

spot_img
- Advertisement -
- Advertisement -

ಕುಂದಾಪುರ: ಬುಧವಾರ ಪ್ರಾರಂಭಗೊಂಡ ಮಳೆ ಸತತ ಎರಡು ಹಗಲು ಮತ್ತು ರಾತ್ರಿ ಸುರಿದ ಪರಿಣಾಮ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸದ್ಯ ಮಳೆ ಇಳಿಮುಖಗೊಂಡಿದ್ದರೂ ಎರಡು ದಿನದ ಮಳೆ ಸಾಕಷ್ಟು ತೊಂದರೆ ಕೊಟ್ಟಿದೆ. ಮಳೆಯಿಂದಾಗಿ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ -66ರ ವಿವಿಧ ಕಡೆ ಕೃತಕ ನೆರೆ ಸೃಷ್ಟಿಯಾಗಿತ್ತು.

ಕುಂದಾಪುರ ಶಾಸ್ತ್ರೀ ವೃತ್ತದ ಬಳಿ, ಕೋಟೇಶ್ವರ, ಬೀಜಾಡಿ, ಅಂಕದಕಟ್ಟೆ, ಹಂಗಳೂರು ಬಳಿ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ನೀರು ಶೇಖರಗೊಂಡಿತ್ತು.‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭದ ದಿನದಿಂದ ಈವರೆಗೂ ಸಮಸ್ಯೆಯ ಕೇಂದ್ರವಾಗಿರುವ ಕುಂದಾಪುರ ಬಸ್ರೂರು ಮೂರುಕೈ ಹಾಗೂ ವಿನಾಯಕ ಜಂಕ್ಷನ್, ಟಿಟಿ ರಸ್ತೆಯ ಸಮೀಪದಲ್ಲಿ ಎರಡೂ ಭಾಗದ ಸರ್ವೀಸ್ ರಸ್ತೆ ಸಹಿತ ಅಂಡರ್ ಪಾಸ್ ಕೂಡ ಜಲಾವೃತಗೊಂಡಿತ್ತು. ಇದರಿಂದ  ನಗರ ಭಾಗಕ್ಕೆ ಸಂಪರ್ಕಿಸುವ ಹಾಗೂ ನಗರದಿಂದ ಸರ್ವೀಸ್ ರಸ್ತೆ ಮೂಲಕ ವಿವಿಧೆಡೆ ತೆರಳುವ ಮತ್ತು ರಾ.ಹೆದ್ದಾರಿಗೆ ಸಂಪರ್ಕಿಸುವ ವಾಹನ ಸವಾರರು ಪರದಾಡುವಂತಾಯಿತು.

- Advertisement -
spot_img

Latest News

error: Content is protected !!