Friday, August 21, 2026
Homeಕರಾವಳಿಮಂಗಳೂರು: “ನನ್ನನ್ನು ಹುಡುಕಬೇಡಿ” ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಇಂಜಿನಿಯರ್ ಪ್ರತ್ಯಕ್ಷ

ಮಂಗಳೂರು: “ನನ್ನನ್ನು ಹುಡುಕಬೇಡಿ” ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಇಂಜಿನಿಯರ್ ಪ್ರತ್ಯಕ್ಷ

- Advertisement -
- Advertisement -

ಮಂಗಳೂರು : ನನ್ನನ್ನು ಹುಡುಕಬೇಡಿ” ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಎಂಆರ್‌ಪಿಎಲ್‌ ಇಂಜಿನಿಯರ್ ಪ್ರತ್ಯಕ್ಷವಾಗಿದ್ದಾರೆ.
ಎಂಆರ್‌ಪಿಎಲ್‌ ಸಂಸ್ಥೆಯಲ್ಲಿ ಎಂಜಿನಿಯರ್‌ ಆಗಿದ್ದ ರಾಘವೇಂದ್ರ ಕೆ.ಆರ್‌ ಕ್ಷಮಿಸಿ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಪತ್ರ ಬರೆದಿಟ್ಟು ಮೇ 16ರಂದು ನಾಪತ್ತೆಯಾಗಿದ್ದವರು. ಇಂದು ಅವರು ಪ್ರತ್ಯಕ್ಷರಾಗಿದ್ದಾರೆ.

ಎಫ್‌ಐಆರ್‌ ದಾಖಲಾಗಿರುವ ಕಾರಣ ಸುರತ್ಕಲ್‌ ಪೊಲೀಸ್‌ ಠಾಣೆಗೆ ಬಂದು ಮಾಹಿತಿ ನೀಡಿದರು. ಕುಟುಂಬದಲ್ಲಿ ಭಿನ್ನಾಭಿಪ್ರಾಯದಿಂದ ಮನಃಶಾಂತಿಗಾಗಿ ಮಂತ್ರಾಲಯಕ್ಕೆ ತೆರಳಿದ್ದೆ ಎಂದು ಸಮಜಾಯಿಷಿ ನೀಡಿದ್ದು, ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ರಾಘವೇಂದ್ರ ಚೀಟಿ ಬರೆದಿಟ್ಟು ಆಧಾರ್‌ ಕಾರ್ಡ್‌,ಎಟಿಎಂ,ಕೀ ಪ್ಯಾಡ್‌,ಔಷಧ ಬಿಟ್ಟು ಹೋಗಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇದೀಗ ಅವರು ವಾಪಸ್ಸಾಗಿದ್ದು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

Latest News

error: Content is protected !!