Wednesday, June 24, 2026
Homeತಾಜಾ ಸುದ್ದಿಅಪ್ಪನ ಫೋಟೋದೊಂದಿಗೆ ಜ್ಯೂ. ಚಿರುವಿನ ಆಟ: ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್...

ಅಪ್ಪನ ಫೋಟೋದೊಂದಿಗೆ ಜ್ಯೂ. ಚಿರುವಿನ ಆಟ: ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್…

- Advertisement -
- Advertisement -

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅವರು ನಮ್ಮೊಂದಿಗಿಲ್ಲ ಅನ್ನೋ ನೋವನ್ನು ಇನ್ನೂ ಕೂಡ ಯಾರಿಂದಲೂ ಅರಗಿಸಿಕೊಳ್ಳೋದಕ್ಕೆ ಆಗ್ತಾನೆ ಇಲ್ಲ. ಚಿರಂಜೀವಿ ಅವರು ನಮ್ಮೆಲ್ಲರನ್ನು ಅಗಲಿ ಹತ್ರ ಹತ್ರ ಒಂದು ವರ್ಷಗಳಾಗುತ್ತಾ ಬಂದ್ರೂ ಇನ್ನೂ ಕೂಡ ಅಭಿಮಾನಿಗಳು ಅವರನ್ನು ಮರೆತಿಲ್ಲ. ದಿನ ಒಂದಿಲ್ಲೊಂದು ಒಂದು ಕಾರಣ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ.

ಅಂದ್ಹಾಗೆ ಮೇಘನಾ ಅವರು ಚಿರಂಜೀವಿ ಅಗಲಿಕೆಯ ನೋವಿನಲ್ಲಿದ್ದರೂ ಅವರ ನೋವನ್ನು ಕೊಂಚ ಕಡಿಮೆ ಮಾಡಿದ್ದು ಜ್ಯೂನಿಯರ್ ಚಿರು. ಮಗನ ಆಗಮನದ ಬಳಿಕ ಮೇಘನಾ ರಾಜ್ ಆತನೊಂದಿಗೆ ಸಮಯ ಕಳೆಯುತ್ತಾ ತನ್ನ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದಾರೆ. ಅಲ್ಲದೇ ಪದೇ ಪದೇ ಮಗನೊಂದಿಗೆ ತಾವು ಕಳೆಯುತ್ತಿರುವ ಅಮೂಲ್ಯವಾದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಅಂತಹದ್ದೇ ವಿಡಿಯೋವೊಂದನ್ನು ಮೇಘನಾ ರಾಜ್ ಶೇರ್ ಮಾಡಿಕೊಂಡಿದ್ದಾರೆ.

ಹೌದು.. ಮೇಘನಾ ರಾಜ್ ತಮ್ಮ ಮುದ್ದಾದ ಮಗ ಜ್ಯೂನಿಯರ್ ಚಿರುವಿನ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ವೀಡಿಯೋದಲ್ಲಿ ನಟಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರಂಜೀವಿ ಸರ್ಜಾ ಫೋಟೋವನ್ನು ತೋರಿಸಿ, ಅಪ್ಪನನ್ನು ನೋಡು ಎಂದು ಹೇಳುತ್ತಾರೆ. ಆಗ ಜ್ಯೂನಿಯರ್ ಚಿರು ಫೋಟೋದಲ್ಲಿ ಚಿರಂಜೀವಿ ಸರ್ಜಾರನ್ನು ಕಣ್ಣು ಮಿಟಿಕಿಸದೇ ದಿಟ್ಟಿಸಿ ನೋಡುತ್ತಾ, ತನ್ನ ಎರಡು ಕೈಗಳಿಂದ ಫೋಟೋವನ್ನು ಮುಟ್ಟಿ ಮುಗುಳುನಗೆ ಬೀರಿ, ಅಪ್ಪನ ಫೋಟೋದೊಂದಿಗೆ ಆಟ ಆಡಿದ್ದಾನೆ.

ಈ ವೀಡಿಯೋವನ್ನು ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಪವಾಡ- ಶಾಶ್ವತ ಮತ್ತು ಯಾವಾಗಲೂ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋಗೆ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ, ಪನ್ನಾಗಭರಣ, ಕಿರುತರೆ ನಟಿ ಶ್ವೇತ ಚೆಂಗಪ್ಪ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!