Monday, May 17, 2021
Homeಕರಾವಳಿಬೆಳ್ತಂಗಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದರ್ಶನ್ ಬೆಂದ್ರಾಳ ಕೊಲೆ ಪ್ರಕರಣ: ಮೂವರು ಆರೋಪಿಗಳ...

ಬೆಳ್ತಂಗಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸುದರ್ಶನ್ ಬೆಂದ್ರಾಳ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ, ಇಬ್ಬರಿಗಾಗಿ ಶೋಧ

- Advertisement -
- Advertisement -

ಬೆಳ್ತಂಗಡಿ: ಉತ್ತರ-ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಕ್ರಾಸಿನ ಹತ್ತಿರ ಏಪ್ರಿಲ್ 29 ರಂದು ನಡೆದ ರಿಯಲ್ ಎಸ್ಟೇಟ್ ಉದ್ಯಮಿ ( ಸ್ವಂತ ಮನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ) ಸುದರ್ಶನ್ ಯಾನೆ ಹರ್ಷ ಬೆಂದ್ರಾಳ(39) ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧೀಕ್ಷಕರಾದ  ಶಿವಪ್ರಕಾಶ ದೇವರಾಜು ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿತ್ತು. ಅದರಂತೆ ಪ್ರಭುಗೌಡ ಡಿ.ಕೆ ಪಿ.ಐ ಮುಂಡಗೋಡ ಹಾಗೂ ತಂಡದವರು ಪ್ರಕರಣ ದಾಖಲಾದ ಎರಡು ದಿನದೊಳಗೆ ಆರೋಪಿತರಾದ ಮಂಜುನಾಥ, ಕಿರಣ ಮಲ್ಲಿಕಜಾನ್ ನನ್ನು ಬಂಧಿಸಿದ್ದಾರೆ. ಇನ್ನು ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವೆರೆಸಿದ್ದಾರೆ.

ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ ನೀಲಿ ಬಣ್ಣದ ಎಸ್ಕ್ರಾಸ್ ಕಾರು, ಕೊಲೆ ಮಾಡಲು ಬಳಸಿದ ಕಬ್ಬಿಣದ ಪೈಪಿನಂತಿರುವ ರಾಡ್ ಹಾಗೂ ಚಾಕುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಇನ್ನಿಬ್ಬರು ಆರೋಪಿತಗಳಾದ ಶಬ್ಬೀರ್ ಹಾಗೂ  ಹಜರತ್ಲಿ ತಲೆ ಮರೆಸಿಕೊಂಡಿದ್ದು ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಮುಖ ಆರೋಪಿ ಮಂಜುನಾಥ್…

ಆರೋಪಿಗಳ ಹಿನ್ನಲೆ :

ಆರೋಪಿ ನಂ-1 : ಮಂಜುನಾಥ ತಂದೆ ನಾಗೇಂದ್ರ ಕಾಜಗಾರ ಇವನು ಈ ಹಿಂದೆ ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಕೊಲೆಗೀಡಾದ ಪ್ರೂಟ್ ಇರ್ಪಾನ್ ಎನ್ನುವ ರೌಡಿಯ ಸಹಚರನೆಂದು ತಿಳಿದುಬಂದಿದೆ.

ಆರೋಪಿ ನಂ-2 : ಕಿರಣ 2019 ರಲ್ಲಿ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದ ಡಕಾಯತಿ ಪ್ರಕರಣದ ಆರೋಪಿ.

ಆರೋಪಿ ನಂ-3 : ಮಲ್ಲಿಕಜಾನ್ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ..

ಆರೋಪಿ ನಂ-4 : ಶಬ್ಬೀರ ಕೊಲೆಗೆ ಪ್ರಯತ್ನದ ಹಾಗೂ ಸರಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಆರೋಪಿ.

ಆರೋಪಿ ನಂ-5 : ಹಜರತ್ಅಲಿ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್ ನ ಹೈಸ್ಕೂಲ್ ಸಹಪಾಠಿಯಾಗಿರುತ್ತಾನೆ.

ಕೊಲೆಗೆ ಕಾರಣ : ಈ ಪ್ರಕರಣದಲ್ಲಿ ಕೊಲೆಗೀಡಾದ ಹರ್ಷ ಬೆಂದ್ರಾಳ ಹಾಗೂ ಆರೋಪಿ ಮಂಜುನಾಥ ಇವರ ಮದ್ಯೆ ಎರಡು ವರ್ಷಗಳ ಹಿಂದೆ ಸಣ್ಣ ಜಗಳವಾಗಿದ್ದು ಹಾಗೂ ಮುಂಡಗೋಡದಲ್ಲಿ ಮೃತ ಹರ್ಷ ಇವನ ಪ್ರಭಾವ ಹೆಚ್ಚಾಗುತ್ತಿದ್ದು ಹಾಗೇ ಬಿಟ್ಟರೆ ತನಗೆ ಬೆಲೆ ಇರುವದಿಲ್ಲಾ ಎನ್ನುವ ಉದ್ದೇಶದಿಂದ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

 ಈ ಪ್ರಕರಣವನ್ನು ಭೇದಿಸಲು ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ಐಪಿಎಸ್,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಬದರಿನಾಥ, ಶಿರಸಿ ಪೊಲಿಸ್ ಉಪಾಧೀಕ್ಷಕರಾದ ರವಿ ನಾಯಕರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಭುಗೌಡ ಡಿ.ಕೆ, ಮಹೇಶ ಪಿ.ಐ ಸಿದ್ದಾಪೂರ ರವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ ಮಬನೂರ, ಪ್ರೋಬೆಶನರಿ ಪಿಎಸ್ಐ ಕಸ್ತೂರಿ ಕುಕನೂರ ಹಾಗೂ ಎಎಸ್ಐ ಖೀರಪ್ಪ ಘಟಕಾಂಬಳೆ, ಪೊಲೀಸ್ ಸಿಬ್ಬಂದಿಯವರಾದ ಧರ್ಮರಾಜ ನಾಯ್ಕ, ಗಣಪತಿ, ರಾಘವೇಂದ್ರ ಜಿ.  ರಾಘವೇಂದ್ರ ಮೂಳೆ, ಕುಮಾರ, ತಿರುಪತಿ, ಮಹೇಶ, ಗುರು ನಾಯಕ, ವಿನೋದಕುಮಾರ, ಭಗವಾನ, ಅರುಣಕುಮಾರ, ಅಣ್ಣಪ್ಪ, ರಾಘವೇಂದ್ರ ಪಟಗಾರ ಹಾಗೂ ಸಿದ್ದಾಪೂರ ಠಾಣೆಯ ರಾಜ್ ಮಹಮ್ಮದ, ಗಂಗಾಧರ ಹೊಂಗಲ್ರವರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ಕಾರ್ಯವನ್ನು ನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

- Advertisement -
- Advertisment -

Latest News

error: Content is protected !!