Thursday, March 28, 2024
Homeತಾಜಾ ಸುದ್ದಿಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವಿನ ಮಾಸ್ಟರ್ ಮೈಂಡ್ ವಿ ಸೋಮಣ್ಣ: ಚಾಣಾಕ್ಷ ನಾಯಕನ ತಂತ್ರಗಾರಿಕೆಯಿಂದ ಸಿಕ್ತು ಭರ್ಜರಿ...

ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವಿನ ಮಾಸ್ಟರ್ ಮೈಂಡ್ ವಿ ಸೋಮಣ್ಣ: ಚಾಣಾಕ್ಷ ನಾಯಕನ ತಂತ್ರಗಾರಿಕೆಯಿಂದ ಸಿಕ್ತು ಭರ್ಜರಿ ಗೆಲುವು

spot_img
- Advertisement -
- Advertisement -

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕಿತ್ವದಿಂದ ಗುರುತಿಸಿಕೊಂಡಿರುವವರು ಸಚಿವ ವಿ. ಸೋಮಣ್ಣ  ಅವರು. ಕಾಯಕವೇ ಕೈಲಾಸ.. ಇದು ವಿ. ಸೋಮಣ್ಣ ಅವರು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವ ಧ್ಯೇಯ ಮತ್ತು ಸಿದ್ಧಾಂತ.ಹಾಗಾಗಿಯೇ ಅವರು ತಮ್ಮ ರಾಜಕೀಯ ಜೀವನದ ಜೊತೆ ಜೊತೆಗೆ ವೈಯುಕ್ತಿಕ ಜೀವನದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ.

ವಸತಿ ಸಚಿವರಾಗಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿಕೊಂಡು ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವ ಪಕ್ಷದ ಶಿಸ್ತಿನ ಕಾರ್ಯಕರ್ತ ವಿ. ಸೋಮಣ್ಣ.  ಹೌದು..! ವಿ.ಸೋಮಣ್ಣ ರಾಜ್ಯ ಬಿಜೆಪಿಯ ವಾಮನ ಮೂರ್ತಿ. ಅಬ್ಬರ, ಆರ್ಭಟ ವಿಲ್ಲದೇ ಕೆಲಸ ಮಾಡಿಮುಗಿಸಬಲ್ಲ ಚಾಣಕ್ಯ ರಾಜಕಾರಣಿ. ಮಾತುಗಳು ಸಾಧನೆಯಾಗಬಾರದು ಸಾಧನೆಗಳೇ ಮಾತನಾಡಬೇಕು ಎಂಬಂತೆ ವಿ.ಸೋಮಣ್ಣ ಕೆಲಸ ಮಾಡುತ್ತಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಬಸವಕಲ್ಯಾಣ ಉಪಚುನಾವಣಾ ಫಲಿತಾಂಶ.

ಬಸವಕಲ್ಯಾಣ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಅಭ್ಯರ್ಥಿ ಶರಣು ಸಲಗಾರ್ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಈ ಗೆಲುವಿನ ಹಿಂದೆ ವಿ ಸೋಮಣ್ಣ ಅವರ ತಂತ್ರಗಾರಿಕೆ ಇದೆ. ಸಂಘಟನೆಯ ಚತುರತೆ ಇದೆ. ಸೋಮಣ್ಣ ಅವರ ಕಾರ್ಯ ವೈಖರಿಯಿಂದಲೇ ಬಸವಕಲ್ಯಾಣದಲ್ಲಿ ಗೆಲುವು ದಾಖಲಿಸಲು ಸಾಧ್ಯವಾಯ್ತು ಎಂಬುದರಲ್ಲಿ ಎರಡು ಮಾತಿಲ್ಲ.

ರಾಜ್ಯ ಬಿಜೆಪಿ ವಿ ಸೋಮಣ್ಣ ಅವರಿಗೆ ಬಸವಕಲ್ಯಾಣ ಉಪಚುನಾವಣೆಯ ಉಸ್ತುವಾರಿ ನೀಡಿತ್ತು. ಇದನ್ನ ಸಮರ್ಥವಾಗಿ ನಿಭಾಯಿಸಿರುವ ಸೋಮಣ್ಣ ಅವರು ತಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ನಾಯಕರ ವಿಶ್ವಾಸ ಗಳಿಸುವುದರ ಜೊತೆಗೆ ರಾಜ್ಯ ನಾಯಕರನ್ನು ಒಟ್ಟಾಗಿಸಿಕೊಂಡು ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವಲ್ಲಿ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದಾರೆ. 

ಹಾಗಂತ ವಿ. ಸೋಮಣ್ಣ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಇದೇನು ಹೊಸತಲ್ಲ. ಈ ಹಿಂದಿನ ಚುನಾವಣೆಗಳಲ್ಲೂ ಸೋಮಣ್ಣನವರು ಪಕ್ಷ ನೀಡಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದೀಗ ಈ ಹಿಂದಿನ ಸಾಧನೆಗಳಿಗೆ ಬಸವಕಲ್ಯಾಣ ಬೈ ಎಲೆಕ್ಷನ್ ಗೆಲುವು ಸೇರ್ಪಡೆಗೊಂಡಿದೆ.

ಯಾಕಂದ್ರೆ ಸಂಘಟನೆ, ಚಾಣಕ್ಷತನ ಅಂದ್ರೆ ವಿ.ಸೋಮಣ್ಣ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಕಾರ್ಯಕರ್ತರ ಮನವೋಲಿಸಿಕೊಂಡು, ಅವರ ವಿಶ್ವಾಸ ಪಡೆದುಕೊಂಡು ಪಕ್ಷವನ್ನು, ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಎಂಬ ತಂತ್ರಗಾರಿಕೆಗೆ ವಿ. ಸೋಮಣ್ಣ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಬಸವಕಲ್ಯಾಣ ಚುನಾವಣೆಯ ಗೆಲುವು ತಮ್ಮ ಗೆಲುವಲ್ಲ. ಪಕ್ಷದ ಗೆಲುವು, ಇಲ್ಲಿ ಟೀಮ್ ವರ್ಕ್ ಕೆಲಸ ಮಾಡಿದೆ. ಹಾಗಾಗಿ ಇಲ್ಲಿ ಜಯ ಸಾಧಿಸಿದ್ದೇವೆ ಎನ್ನುವುದು ವಿ. ಸೋಮಣ್ಣ ಅವರ ದೊಡ್ಡತನಕ್ಕೆ ನಿದರ್ಶನ.

ಇನ್ನು ಈ ಹಿಂದೆ ವಿ. ಸೋಮಣ್ಣ ಅವರು ಎಷ್ಟೋ ಬಾರಿ ಇದೇ ರೀತಿಯಲ್ಲಿ ಪಕ್ಷದ ಕೆಲಸವನ್ನ ಯಶಸ್ವಿಯಾಗಿ ಮಾಡಿದ್ದಾರೆ.

– ತುಮಕೂರು ಲೋಕಸಭಾ ಎಲೆಕ್ಷನ್ 2019- ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಜಿ.ಎಸ್. ಬಸವರಾಜ್ ಗೆಲುವು ಸಾಧಿಸಿದ್ದರು. ಆಗ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣ ಅವರು.

– ಚಿಂಚೋಳಿ ಬೈ ಎಲೆಕ್ಷನ್ – 2019 – ಅವಿನಾಶ್ ಜಾಧವ್ ಗೆದ್ದಾಗಲೂ ಉಸ್ತುವಾರಿ ವಹಿಸಿಕೊಂಡಿದ್ದು ಸಚಿವ ವಿ. ಸೋಮಣ್ಣನವರು.

– ದೇವದುರ್ಗ ಬೈ ಎಲೆಕ್ಷನ್ – 2016 – ಶಿವಣ್ಣ ಗೌಡ ನಾಯಕ ಜಯ ಗಳಿಸಿದ್ದರು. ಆಗಲೂ ಉಪ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.

– ಚನ್ನಪಟ್ಟಣ ಬೈ ಎಲೆಕ್ಷನ್ –  2011- ಸಿ.ಪಿ. ಯೋಗಿಶ್ವರ್ ಗೆಲುವು ಸಾಧಿಸಿದ್ದರು. ಆಗಲೂ ವಿ. ಸೋಮಣ್ಣನವರು ಉಪ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

– ಕಡೂರು ಬೈ ಎಲೆಕ್ಷನ್ –  2010 – ಡಾ. ವೈ.ಸಿ. ವಿಶ್ವನಾಥ್ ಗೆಲುವು ಸಾಧಿಸಿದ್ದರು. ಉಪ ಚುನಾವಣೆಯ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು ವಿ. ಸೋಮಣ್ಣನವರು.

– ಕೊಪ್ಪಳ ಬೈ ಎಲೆಕ್ಷನ್ –  2011 – ಕೆ.ಎಸ್. ಅಮರಪ್ಪ ಅವರಿಗೆ ಜಯ. ಉಸ್ತುವಾರಿ ವಹಿಸಿಕೊಂಡಿದ್ದು ಚಾಣಕ್ಷ ನಾಯಕ ವಿ. ಸೋಮಣ್ಣನವರು.

– ಬೆಂಗಳೂರು ದಕ್ಷಿಣ ಲೋಕಸಭಾ – 2009, 2014, 2018- 2009, 2014ರಲ್ಲಿ ಅನಂತ್ ಕುಮಾರ್ ಮತ್ತು 2018ರಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.

-ತುಮಕೂರು ಲೋಕಸಭಾ ಎಲೆಕ್ಷನ್ – 2009ರಲ್ಲೂ ವಿ. ಸೋಮಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. 

– 2015ರ ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ 11 ಸ್ಥಾನಗಳನ್ನು ಗೆಲ್ಲುವಲ್ಲಿ ವಿ. ಸೋಮಣ್ಣನವರ ಪಾತ್ರ ಮಹತ್ವದ್ದಾಗಿತ್ತು.

2010 ಬಿಬಿಎಂಪಿ ಚುನಾವಣೆಯಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 16 ಸ್ಥಾನಗಳನ್ನು ಗೆದ್ದಿದ್ದು ಕೂಡ ವಿ. ಸೋಮಣ್ಣನನವರ ವರ್ಚಸ್ಸಿನಿಂದಲೇ.

2019 ಬಿಬಿಎಂಪಿ ಕಾವೇರಿಪುರ ಬೈ ಎಲೆಕ್ಷನ್ ನಲ್ಲಿ ಪಲ್ಲವಿ ಚಿನ್ನಪ್ಪ ಅವರ ಗೆಲುವಿನಲ್ಲೂ ವಿ. ಸೋಮಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.

ಹೀಗೆ ಅನೇಕ ಚುನಾವಣೆಗಳಲ್ಲಿ ಪಕ್ಷ ಕೊಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ಮುನ್ನೆಡೆಸಿ ವಿ ಸೋಮಣ್ಣ ವಿಜಯ ಪತಾಕೆ ಹಾರಿಸಿದ್ದಾರೆ.

- Advertisement -
spot_img

Latest News

error: Content is protected !!