Friday, June 5, 2026
Homeಉತ್ತರ ಕನ್ನಡಕಾಳಿ ನದಿ ತಿರುವು ವಿರೋಧಿಸಿ ಉತ್ತರಕನ್ನಡದ ಜೋಯ್ಡಾದಲ್ಲಿ ಬಂದ್

ಕಾಳಿ ನದಿ ತಿರುವು ವಿರೋಧಿಸಿ ಉತ್ತರಕನ್ನಡದ ಜೋಯ್ಡಾದಲ್ಲಿ ಬಂದ್

- Advertisement -
- Advertisement -

ಕಾರವಾರ: ಕಾಳಿ ನದಿ ನೀರು ಉತ್ತರ ಕರ್ನಾಟಕಕ್ಕೆ ಒಯ್ಯುವ ಯೋಜನೆ ಖಂಡಿಸಿ ಇಂದು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕು ಬಂದ್ ನಡೆಸಲಾಗಿದೆ.

ಜೋಯ್ಡಾ ಬಂದ್‌ಗೆ ಕಾಳಿ ಬ್ರಿಗೇಡ್ ಸಂಘಟನೆ ಕರೆ ಕೊಟ್ಟಿದ್ದು, ಬಂದ್‌ಗೆ ಬೆಂಬಲಿಸಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಬಂದ್‌ಗೆ ಬೆಂಬಲ ನೀಡಿ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಜೋಯ್ಡಾ ಸರ್ಕಲ್‌ನಿಂದ ತಹಶಿಲ್ದಾರರ ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಕಾಳಿ ನೀರು ನಮ್ಮ ನೀರು, ನಾವು ಯಾರಿಗೂ ಕೊಡಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!