Thursday, June 4, 2026
Homeಕರಾವಳಿಉಡುಪಿಪತ್ರಕರ್ತ "ಸುರೇಶ್ ಆಚಾರ್ಯ ಪಿಲಾರು " ನಿಧನ

ಪತ್ರಕರ್ತ “ಸುರೇಶ್ ಆಚಾರ್ಯ ಪಿಲಾರು ” ನಿಧನ

- Advertisement -
- Advertisement -

ಮುಂಬೈ: ಬೃಹನ್ಮುಂಬಯಿಯ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆಗೈದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಸುರೇಶ್ ಆಚಾರ್ಯ ಪಿಲಾರು(49) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಇವರು 2012 -2015ನೇ ಸಾಲಿನಲ್ಲಿ ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಜೊತೆ ಕೋಶಾಧಿಕಾರಿ ಆಗಿದ್ದರು.

ಉದಯವಾಣಿ ಕನ್ನಡ ದೈನಿಕದ ಮುಂಬೈ ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿ ಸದ್ಯ ವಕೀಲ ವೃತ್ತಿಯಲ್ಲಿ ತೊಡಗಿಸಿದ್ದ ಇವರು ಉಡುಪಿ ಜಿಲ್ಲೆಯ ಕಾರ್ಕಳ ಪಿಲಾರು ಮೂಲದವರಾಗಿದ್ದು ನವಿ ಮುಂಬಯಿ ನೆರೂಲ್ ಸೆಕ್ಟರ್ 10ರ ಗಾಂವ್‌ದೇವಿ ಇಲ್ಲಿನ ಪ್ರಸಾದ್ ಬಿಲ್ಡಿಂಗ್‌ನಲ್ಲಿ ವಾಸವಾಗಿದ್ದರು.ಮೃತರು ಪತ್ನಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!