Monday, May 13, 2024
Homeತಾಜಾ ಸುದ್ದಿ2021ರಲ್ಲಿ ಡಿಗ್ರಿ ಮುಗಿಸಿದವರಿಗೆ ಸಿಗಲ್ವಾ ಕೆಲಸ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಪೋಸ್ಟ್

2021ರಲ್ಲಿ ಡಿಗ್ರಿ ಮುಗಿಸಿದವರಿಗೆ ಸಿಗಲ್ವಾ ಕೆಲಸ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಪೋಸ್ಟ್

spot_img
- Advertisement -
- Advertisement -

ತಮಿಳುನಾಡು : 2021 ರಲ್ಲಿ ಪದವಿ ಪಾಸಾದವರಿಗೆ ಕೆಲಸ ಸಿಗಲ್ವಾ ಅನ್ನೋ ಚರ್ಚೆಯೊಂದು ಇದೀಗ ಜೋರಾಗಿದೆ. ಅದಕ್ಕೆ ಕಾರಣ ಮಧುರೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡಲು ಹುದ್ದೆಗಳು ಖಾಲಿ ಇರುವ ಜಾಹೀರಾತೊಂದು ವೈರಲ್ ಆಗಿತ್ತು. ನೇರ ಸಂದರ್ಶನಕ್ಕೆ ಆಹ್ವಾನವಿರುವ ಈ ಜಾಹೀರಾತಿನಲ್ಲಿ 2021ರಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಹರಲ್ಲ ಎಂಬ ವಾಕ್ಯವೊಂದು ಹೀಗೆ ವೈರಲ್ ಆಗಿದೆ.

2021ರಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವೇ ? ಎಂಬೆಲ್ಲಾ ಪ್ರಶ್ನೆಗಳು ಕಾಮೆಂಟ್‌ಗಳ ರೂಪದಲ್ಲಿ ಹರಿದಾಡತೊಡಗಿವೆ. ಮಾರಾಟ ವಿಭಾಗದ ಶಾಖಾಧಿಕಾರಿಯ ಹುದ್ದೆಗೆ ಆಹ್ವಾನಿಸಿ ಈ ಜಾಹೀರಾತು ಪ್ರಕಟಿಸಲಾಗಿದೆ.

ಇದೀಗ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಾಹೀರಾತು ಪ್ರಕಟಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್, “ಇದೊಂದು ಟೈಪಿಂಗ್ ದೋಷವಾಗಿದ್ದು, ಇದಕ್ಕಾಗಿ ವಿಷಾದಿಸುತ್ತೇವೆ. ವಯೋಮಾನದ ಮಿತಿಗಳ ಒಳಗೆ ಇರುವ ಅಭ್ಯರ್ಥಿಗಳು ಯಾವುದೇ ವರ್ಷದಲ್ಲಿ ಪದವಿ ಪೂರೈಸಿದ್ದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿದೆ.

- Advertisement -
spot_img

Latest News

error: Content is protected !!