Sunday, April 28, 2024
HomeWorldಪಾಕಿಸ್ತಾನ: ಪಂಜಾಬ್​ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ದಾಳಿ!

ಪಾಕಿಸ್ತಾನ: ಪಂಜಾಬ್​ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ದಾಳಿ!

spot_img
- Advertisement -
- Advertisement -

ಪಾಕಿಸ್ತಾನ: ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನವನ್ನು ಮುಸ್ಲಿಮರ ಗುಂಪೊಂದು ಧ್ವಂಸಗೊಳಿಸಿದ್ದು, ಇಲ್ಲಿದ್ದ ದೇವರ ವಿಗ್ರಹವನ್ನು ಅಪವಿತ್ರಗೊಳಿಸಿದ್ದಲ್ಲೆ, ಅದನ್ನು ಭಾಗಶಃ ಸುಟ್ಟುಹಾಕಲಾಗಿದೆ.

ರಹೀಮ್​ ಯಾರ್​ ಖಾನ್​ ಜಿಲ್ಲೆಯಲ್ಲಿರುವ, ಭೋಂಗ್​ ನಗರದಲ್ಲಿ ಈ ಸಿದ್ಧಿವಿನಾಯಕ ದೇವಸ್ಥಾನವಿದ್ದು, ಲಾಹೋರ್​​​ನಲ್ಲಿರುವ ಮುಸ್ಲಿಮರಿಗೆ ಸಂಬಂಧಪಟ್ಟ ಸಂಸ್ಥೆಯನ್ನೊಂದು ನಾಶಗೊಳಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಹೀಗೆ ಸಿದ್ಧಿವಿನಾಯಕ ದೇಗುಲ ನಾಶಗೊಳಿಸಿದ್ದಾಗಿ ಆ ಗುಂಪು ಹೇಳಿಕೊಂಡಿದೆ.

ಕೈಯಲ್ಲಿ ಕಬ್ಬಿಣದ ರಾಡ್​, ಕೋಲು, ಕಲ್ಲುಗಳನ್ನು ಹಿಡಿದುಕೊಂಡು ಸಿದ್ಧಿವಿನಾಯಕ ದೇಗುಲಕ್ಕೆ ನುಗ್ಗಿ, ಎಲ್ಲವನ್ನೂ ಹಾಳುಗೆಡವಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ರೇಂಜರ್ಸ್​​ನ್ನು ರಕ್ಷಣೆಗೆ ನಿಯೋಜಿಸಲಾಗಿದೆ.

ದೇಗುಲ ಇರುವ ಸುತ್ತಮುತ್ತ 100 ಹಿಂದೂ ಕುಟುಂಬಗಳಿದ್ದು, ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನೂ ವಹಿಸಲಾಗಿದೆ ಎಂದೂ ಸ್ಥಳೀಯ ಸರ್ಕಾರ ತಿಳಿಸಿದೆ. ಇನ್ನು ವಿಡಿಯೋ ಶೇರ್​ ಮಾಡಿಕೊಂಡಿರುವ ಪಾಕಿಸ್ತಾನ ತೆಹ್ರೀಕ್​ ಐ ಇನ್​ಸಾಫ್​ ಪಕ್ಷದ ಸಂಸದ ಡಾ. ರಮೇಶ್​ ಕುಮಾರ್ ವಂಕ್ವಾನಿ, ದಯವಿಟ್ಟು ದೇಗುಲ ಧ್ವಂಸಗೊಳಿಸುತ್ತಿರುವುದನ್ನು ತಡೆಯಿರಿ ಹಾಗೂ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!