Saturday, May 18, 2024
Homeಕರಾವಳಿಪುತ್ತೂರು: ಕೋಕೋ, ಅಡಿಕೆ ಹೋಳಿಗೆ ನಂತರ ಇದೀಗ ವೀಳ್ಯದೆಲೆ ಹೋಳಿಗೆಯ ಸರದಿ!!

ಪುತ್ತೂರು: ಕೋಕೋ, ಅಡಿಕೆ ಹೋಳಿಗೆ ನಂತರ ಇದೀಗ ವೀಳ್ಯದೆಲೆ ಹೋಳಿಗೆಯ ಸರದಿ!!

spot_img
- Advertisement -
- Advertisement -

ಪುತ್ತೂರು: ಅಡಿಕೆ ಮತ್ತು ಕೋಕೊ ಬೀಜದಿಂದ ಹೋಳಿಗೆ ತಯಾರಿಸಿ ಗ್ರಾಹಕರ ಮನಗೆದ್ದಿರುವ ಪುತ್ತೂರು ತಾಲ್ಲೂಕು ಗುರಿಮೂಲೆಯ ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರು ಹೊಸ ಪ್ರಯೋಗವಾಗಿ ವೀಳ್ಯದೆಲೆಯಿಂದ ಹೋಳಿಗೆ ತಯಾರಿಸಿದ್ದಾರೆ.

ದೊಡ್ಡ ವೀಳ್ಯದೆಲೆಯನ್ನು ಬಳಸಿ ಈ ಸಿಹಿ ಹೋಳಿಗೆ ಸಿದ್ಧಪಡಿಸಲಾಗಿದೆ. 250 ಗ್ರಾಂನಷ್ಟುವೀಳ್ಯದೆಲೆಯನ್ನು ಮಾತ್ರ ಬಳಸಿ 40 ಹೋಳಿಗೆ ಮಾಡಲಾಗಿದೆ. ಸದ್ಯಕ್ಕೆ ಒಂದು ಹೋಳಿಗೆಗೆ 15 ರು. ನಿಗದಿಪಡಿಸಲಾಗಿದೆ. ಅದಕ್ಕೆ ಅಗತ್ಯ ವಸ್ತುಗಳನ್ನು ಹಾಕಿ ಮಿಕ್ಸಿಯಲ್ಲಿ ಅರೆದು ಬಳಿಕ ಮೈದ ಹಿಟ್ಟಿನ ಕನಕ ಉಂಡೆಯಲ್ಲಿ ಸೇರಿಸಿ ಈ ಹೋಳಿಗೆ ಮಾಡಲಾಗಿದೆ. ಇದರ ರುಚಿ ಕೂಡ ತಾಂಬೂಲವನ್ನೇ ಹೋಲುತ್ತದೆ.

ಕೇವಲ ವೀಳ್ಯದೆಲೆಯನ್ನು ಮಾತ್ರ ಬಳಸಿದ ಕಾರಣ ಇದು ಆರೋಗ್ಯಕ್ಕೆ ಹಾನಿಕರವಲ್ಲ ಎಂಬುದು ಶ್ರೀಕೃಷ್ಣ ಶಾಸ್ತ್ರಿಯ ಅಭಿಪ್ರಾಯ.ತಾಂಬೂಲದ ಹೋಳಿಗೆ ತಾಂಬೂಲ ಪ್ರಿಯರ ಮನ ತಣಿಸಲು ಸಜ್ಜಾಗಿದ್ದು, ಶಾಸ್ತ್ರಿ ಹೋಂ ಪ್ರಾಡಕ್ಟ್ಸ್ ಹೆಸರಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ

- Advertisement -
spot_img

Latest News

error: Content is protected !!