Sunday, June 7, 2026
Homeತಾಜಾ ಸುದ್ದಿಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಮಹಾಸ್ವಾಮಿ ಲಿಂಗೈಕ್ಯ

ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಮಹಾಸ್ವಾಮಿ ಲಿಂಗೈಕ್ಯ

- Advertisement -
- Advertisement -

ದಾವಣಗೆರೆ: ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಜಯದೇವ ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ. ಚಿತ್ರದುರ್ಗ ಮುರುಘಾ ಮಠದ ಅಧೀನದಲ್ಲಿದ್ದ ಶಾಖಾಮಠದ ಪೀಠಾಧಿಪತಿಯಾಗಿದ್ದ ಅವರು ಶಾಖಾಮಠಗಳಲ್ಲಿ ಹಿರಿಯ ಶ್ರೀಗಳಾಗಿದ್ದು, ರಾಜ್ಯದಾದ್ಯಂತ ಹಲವಾರು ಭಕ್ತರನ್ನು ಹೊಂದಿದ್ದರು.

ನಾಳೆ ಮಧ್ಯಾಹ್ನ 12 ಗಂಟೆಗೆ ಚನ್ನಗಿರಿಯ ಶಿವಲಿಂಗಸ್ವಾಮಿ ಮಠದ ಆವರಣದಲ್ಲಿ ಬಸವ ತತ್ವದ ವಿಧಿವಿಧಾನದಂತೆ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂಬುದಾಗಿ ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್. ಪಟೇಲ್ ಸೇರಿದಂತೆ ಹಲವಾರು ರಾಜಕಾರಣಿಗಳು ಇವರ ಕೃಪಾಶಿರ್ವಾದಕ್ಕೆ ಪಾತ್ರರಾಗಿದ್ದರು. ಮುರುಘಾ ಪರಂಪರೆಯ ಹಿರಿಯ ಚೇತನರಾಗಿದ್ದ ಜಯದೇವ ಸ್ವಾಮಿಜಿ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತ ಪಡಿಸಿದ್ದಾರೆ.

- Advertisement -

Latest News

error: Content is protected !!