Tuesday, May 14, 2024
Homeತಾಜಾ ಸುದ್ದಿಹೆರಿಗೆಗೂ ಕೆಲವೇ ಗಂಟೆ ಮುಂಚೆಯೂ ಸೇವೆಗೆ ಹಾಜರಾಗಿ ಮಾದರಿಯಾದ ಮೇಯರ್​..!

ಹೆರಿಗೆಗೂ ಕೆಲವೇ ಗಂಟೆ ಮುಂಚೆಯೂ ಸೇವೆಗೆ ಹಾಜರಾಗಿ ಮಾದರಿಯಾದ ಮೇಯರ್​..!

spot_img
- Advertisement -
- Advertisement -

ಜೈಪುರ: ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸೇವೆಗೆ ಹೆಚ್ಚು ಮಹತ್ವ ನೀಡುವ ಸಾಕಷ್ಟು ನಿಷ್ಟಾವಂತ ರಾಜಕಾರಣಿಗಳನ್ನ ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಸೇರಿರುವ ಜೈಪುರದ ಮೇಯರ್​ ಡಾ. ಸೌಮ್ಯ ಗುರ್ಜರ್​ ಎಂಬವರು ತಡರಾತ್ರಿಯವರೆಗೂ ಕಚೇರಿಯಲ್ಲಿ ಕೆಲಸ ಮಾಡಿ ಮಾರನೇ ದಿನ ಬೆಳಗ್ಗೆ 5.15ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂಬಂಧ ಇಂದು ಬೆಳಗ್ಗೆ ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಸೌಮ್ಯ, ಕಾಯಕವೇ ಕೈಲಾಸ ಎಂದು ಬರೆದುಕೊಂಡಿದ್ದಾರೆ. ಬುಧವಾರ ತಡರಾತ್ರಿಯವರೆಗೆ ನಡೆದಿದ್ದ ಪಾಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ತುಂಬು ಗರ್ಭಿಣಿ ಸೌಮ್ಯ ಮಧ್ಯರಾತ್ರಿ 12.30 ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೂ ಮುಂಜಾನೆ 5.15ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿದ್ದುಕೊಂಡೇ ಮಗುವೊಂದಕ್ಕೆ ಜನ್ಮ ನೀಡಿರುವ ರಾಜಸ್ತಾನದ ಪ್ರಥಮ ಮಹಿಳೆ. ಫೆಬ್ರವರಿ 7ರಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಿದ್ದ ವೇಳೆ ಅವರು, ‘ತುಂಬು ಗರ್ಭಿಣಿಯಾಗಿರುವ ಸಮಯದಲ್ಲಿ ಕೆಲಸ ಮಾಡುವುದು ನಿಜಕ್ಕೂ ರೋಮಾಂಚಕ ಮತ್ತು ಸವಾಲು ಕೂಡ ಹೌದು. ಹೊಸ ಕೆಲಸಗಳನ್ನು, ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ನೋವುಗಳನ್ನು ಮರೆಯಲು ನನಗೆ ಸಹಾಯ ಮಾಡುತ್ತದೆ’ ಎಂದು ಹೇಳಿದ್ದರು.

- Advertisement -
spot_img

Latest News

error: Content is protected !!