Thursday, June 4, 2026
Homeಕರಾವಳಿಮಂಗಳೂರು: ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ಕಾಮುಕ ಅಬ್ದುಲ್ ಮುನೀರ್ ಬಂಧನ

ಮಂಗಳೂರು: ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ಕಾಮುಕ ಅಬ್ದುಲ್ ಮುನೀರ್ ಬಂಧನ

- Advertisement -
- Advertisement -

ಮಂಗಳೂರು: ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯ ಮೊಬೈಲ್ ಮೂಲಕ ವೀಡಿಯೋ ನಡೆಸಿದ್ದ ಆರೋಪಿಯನ್ನು ಉಳ್ಳಾಲದ ಪೊಲೀಸರ ತಂಡ ಬಂಧಿಸಿದೆ. ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಬಂಧಿತ ಆರೋಪಿ.

ಮಹಿಳೆಯು ಅಸೌಖ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸ್ನಾನ ಮಾಡಲೆಂದು ತೆರಳಿದ್ದ ವೇಳೆ ಆರೋಪಿ ಮುನೀರ್‌ ತನ್ನ ಮೊಬೈಲ್‌ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದನು. ಇದನ್ನು ಗಮನಿಸಿದ ಮಹಿಳೆಯು ಹೊರಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ.

ಈ ಕುರಿತು ಮಹಿಳೆಯು ಜ. 20ರಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರದಲ್ಲಿ ದೃಶ್ಯಾವಳಿಗ‌ಳನ್ನು ಪರಿಶೀಲಿಸಿದಾಗ ಮುನೀರ್‌ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆತನ ಮನೆ ಸಮೀಪ ಬಂಧಿಸಿದ್ದಾರೆ.

ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್ ಹಾಗೂ ಪಿಎಸ್‌ಐ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ರೇವಣ್ಣ ಸಿದ್ಧಯ್ಯ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಅಕ್ಬರ್ ಜೊತೆಗಿದ್ದರು.

- Advertisement -

Latest News

error: Content is protected !!