Thursday, June 4, 2026
Homeತಾಜಾ ಸುದ್ದಿಸಚಿವರ ಮುಂದೆ ಸ್ವಾಮೀಜಿಯವರಿಂದ ಆತ್ಮಹತ್ಯೆಗೆ ಯತ್ನ- ಆತ್ಮಹತ್ಯೆಗೆ ಕಾರಣವೇನು ಗೊತ್ತಾ?

ಸಚಿವರ ಮುಂದೆ ಸ್ವಾಮೀಜಿಯವರಿಂದ ಆತ್ಮಹತ್ಯೆಗೆ ಯತ್ನ- ಆತ್ಮಹತ್ಯೆಗೆ ಕಾರಣವೇನು ಗೊತ್ತಾ?

- Advertisement -
- Advertisement -

ಚಿತ್ರದುರ್ಗ: ಇಲ್ಲಿನ ಸಚಿವ ಬಿ.ಶ್ರೀರಾಮುಲು ಅವರ ಮುಂದೆ ಇಂದು ಸ್ವಾಮೀಜಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಿಜೆಪಿ ಕಚೇರಿಯಲ್ಲಿ ನಡೆದಿದೆ. ತನಗೆ ಮಠದ ಪೀಠಾಧಿಕಾರ ತಪ್ಪಿಸಲಾಗಿದೆ ಎಂದು ಆರೋಪಿಸಿ ಶರಣರ ಸುಜ್ಞಾನ ಮಠದ ತಿಪ್ಪೇರುದ್ರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಚಿತ್ರದುರ್ಗ ಹಾಗೂ ಕನಕಪುರದಲ್ಲಿನ ಯೋಗವನ ಬೆಟ್ಟ ಶರಣ ಸುಜ್ಞಾನ ಮಠದ ಪೀಠಾಧಿಕಾರ ತಪ್ಪಿಸಲಾಗಿದೆ, ಹಣ ಬಲ, ಅಧಿಕಾರ ಬಲದಿಂದಾಗಿ ಕೆಲವರು ತನಗೆ ಪೀಠಾಧ್ಯಕ್ಷ ಸ್ಥಾನ ಕೈತಪ್ಪುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗದ ಬಿಜೆಪಿ ಕಚೇರಿಗೆ ಬಂದ ಸ್ವಾಮೀಜಿ ಸಚಿವ ಶ್ರೀರಾಮುಲು ಅವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿ ಅಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

- Advertisement -

Latest News

error: Content is protected !!