Thursday, April 25, 2024
Homeಕ್ರೀಡೆಭಾರತ V/s ಇಂಗ್ಲೆಂಡ್ 2ನೇ ಟೆಸ್ಟ್: ರೋಹಿತ್ ಶರ್ಮಾ ಆಕರ್ಷಕ ಶತಕ, ಗೌರವಯುತ ಮೊತ್ತ ಕಲೆಹಾಕಿದ...

ಭಾರತ V/s ಇಂಗ್ಲೆಂಡ್ 2ನೇ ಟೆಸ್ಟ್: ರೋಹಿತ್ ಶರ್ಮಾ ಆಕರ್ಷಕ ಶತಕ, ಗೌರವಯುತ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

spot_img
- Advertisement -
- Advertisement -

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ರೋಹಿತ್ ಶರ್ಮಾ ಅಮೋಘ ಶತಕದ (161) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 88 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿದೆ.

ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ಉಪ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕದ (67) ಸಾಧನೆ ಮಾಡಿದರು. 4 ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಭಾರತ ತಂಡ ಮೊದಲ ದಿನದಾಟದಲ್ಲೇ ಉತ್ತಮ ನಿರ್ವಹಣೆ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಯತ್ನಿಸಿತು.

ದ್ವಿತೀಯ ಓವರ್‌ನಲ್ಲೇ ಶುಭಮನ್ ಗಿಲ್ (0) ವಿಕೆಟ್ ಕಳೆದುಕೊಂಡ ಭಾರತ ಹಿನ್ನೆಡೆಗೊಳಗಾಯಿತು. ಬಳಿಕ ಚೇತೇಶ್ವರ ಪೂಜಾರ (21) ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರು. ರೋಹಿತ್ ಹಾಗೂ ಪೂಜಾರ ದ್ವಿತೀಯ ವಿಕೆಟ್‌ಗೆ 85 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಆದರೆ ಪೂಜಾರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಸಹ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ 86 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಒಳಗಾಗಿತ್ತು.

ರೋಹಿತ್ ಹಾಗೂ ರಹಾನೆ ನಾಲ್ಕನೇ ವಿಕೆಟ್‌ಗೆ 162 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ದಿನದ ಕೊನೆಯ ಅವಧಿಯಲ್ಲಿ ರೋಹಿತ್ ಹಾಗೂ ರಹಾನೆ ವಿಕೆಟ್ ಕಳೆದುಕೊಂಡ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿಸಿತು. 231 ಎಸೆತಗಳನ್ನು ಎದುರಿಸಿದ ರೋಹಿತ್ 18 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 161 ರನ್ ಗಳಿಸಿದರು. ಇನ್ನೊಂದೆಡೆ 149 ಎಸೆತಗಳನ್ನು ಎದುರಿಸಿದ ರಹಾನೆ ಒಂಬತ್ತು ಬೌಂಡರಿಗಳಿಂದ 67 ರನ್ ಗಳಿಸಿದರು.

ಕೊನೆಯಲ್ಲಿ ರಿಷಭ್ ಪಂತ್ 33 ರನ್ ಗಳಿಸಿ ಅಜೇಯರಾಗುಳಿದರು. ಇನ್ನೊಂದೆಡೆ ರಿವಿಚಂದ್ರನ್ ಅಶ್ವಿನ್ (13) ವಿಕೆಟ್ ಕೂಡಾ ಭಾರತಕ್ಕೆ ನಷ್ಟವಾಗಿತ್ತು. ಪಂತ್‌ಗೆ ಸಾಥ್ ನೀಡುತ್ತಿರುವ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5*) ಕ್ರೀಸಿನಲ್ಲಿದ್ದಾರೆ.

ಇಂಗ್ಲೆಂಡ್ ಪರ ಜಾಕ್ ಲೀಚ್ ಮತ್ತು ಮೋಯಿನ್ ಆಲಿ ತಲಾ ಎರಡು ವಿಕೆಟ್ ಪಡೆದ್ರೆ, ಒಲಿಯ್ ಸ್ಟೋನ್ ಮತ್ತು ಜಾಯ್ ರೂಟ್ ತಲಾ ಒಂದು ವಿಕೆಟ್ ಉರುಳಿಸಿದ್ರು.

- Advertisement -
spot_img

Latest News

error: Content is protected !!