Friday, June 5, 2026
Homeಕರಾವಳಿಉಡುಪಿಕೋಟ: ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್: ನಮ್ಮ ವೈಫಲ್ಯ ಇಲ್ಲ: ಆರಗ ಜ್ಞಾನೇಂದ್ರ

ಕೋಟ: ಮತಾಂಧ ಶಕ್ತಿಗಳನ್ನು ಬೆಳೆಸಿದ್ದೇ ಕಾಂಗ್ರೆಸ್: ನಮ್ಮ ವೈಫಲ್ಯ ಇಲ್ಲ: ಆರಗ ಜ್ಞಾನೇಂದ್ರ

- Advertisement -
- Advertisement -

ಕೋಟ: ಹುಬ್ಬಳ್ಳಿ ಪ್ರಕರಣದಲ್ಲಿ ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ.ಇದಾದ ಬಳಿಕ ರಾತ್ರಿ ಸುಮಾರು 1500 ಜನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು.ಈ ವಿಚಾರದಲ್ಲಿ ಪೊಲೀಸ್ ಫೋರ್ಸ್ ಕಡಿಮೆ ಇದ್ದರೂ ನಾಜೂಕಾಗಿ ಹ್ಯಾಂಡಲ್ ಮಾಡಿದ್ದಾರೆ.ಪೊಲೀಸರು ಬಹಳ ಚೆನ್ನಾಗಿ ಪ್ರಕರಣವನ್ನು ನಿಭಾಯಿಸಿದ್ದಾರೆ,ಇಲ್ಲವಾದರೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಇನ್ನೊಂದು ಕೆಜೆ ಹಳ್ಳಿ ಡಿಜೆ ಹಳ್ಳಿ ಆಗುವುದನ್ನು ತಪ್ಪಿಸಿದ ಪೊಲೀಸರು ಅಭಿನಂದನಾರ್ಹರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಜಿಲ್ಲೆಯ ಸಾಲಿಗ್ರಾಮದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಹುಬ್ಬಳ್ಳಿ ಗಲಾಟೆ ರಾಜ್ಯ ಸರಕಾರದ ವೈಫಲ್ಯ ಹೇಗೆ ಆಗುತ್ತದೆ? ಒಂದು ಕೋಮನ್ನು ಎತ್ತಿ ಕಟ್ಟಿ, ಅವರ ತಪ್ಪುಗಳನ್ನು ಏನೂ ಮಾಡದೇ ಹಾಗೇಯೆ ಬಿಟ್ಟಿದ್ದಾರೆ. ಪಿಎಫ್ ಐನಂತಹ ಮತೀಯ ಸಂಘಟನೆಗಳ ಬಹುತೇಕ ಕೇಸ್ ವಿತ್ ಡ್ರಾ ಮಾಡಿದ್ದು ಕಾಂಗ್ರೆಸ್ ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ,ಕರ್ನಾಟಕ ಬೇರೆ ಉತ್ತರ ಪ್ರದೇಶ ಬೇರೆ, ಅಲ್ಲಿರುವ ಪರಿಸ್ಥಿತಿಗಳೆ ಬೇರೆ. ಅಲ್ಲಿ ಯೋಗಿ ಆದಿತ್ಯನಾಥ ಅವರು ಬರುವ ಮೊದಲು ರೌಡಿಗಳೆ ಆಡಳಿತ ಮಾಡಿದ್ದರು.ಯೋಗಿ ಅವರು ಬಂದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ.ಅನಿವಾರ್ಯ ವಾದಾಗ ಅಲ್ಲಿ ಮಾಡಿದಂತಹ ದಂಡ‌ಪ್ರಯೋಗ ಮಾಡುವುದು ಇಲ್ಲೂ ಅನಿವಾರ್ಯವಾಗುತ್ತೆ. ಕಾನೂನು ಸಂವಿಧಾನಕ್ಕೆ ಬೆಲೆ ಕೊಡದೆ ಇರುವ ಘಟನೆಗಳು ನಡೆದರೆ ಆ ರೀತಿಯೇ ಪಾಠ ಕಲಿಸಬೇಕಾಗುತ್ತೆ.ಆದರೆ ಸದ್ಯಕ್ಕೆ ಕರ್ನಾಟಕದಲ್ಲಿ ಆ ರೀತಿಯ ಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.

- Advertisement -

Latest News

error: Content is protected !!