Sunday, May 19, 2024
Homeತಾಜಾ ಸುದ್ದಿಮಂಗಳೂರು: ಹ್ಯಾಂಡ್‌ ಬ್ಯಾಗ್‌ ನ ಮೆಟಲ್‌ ರಾಡ್‌ನಲ್ಲಿ ಅಕ್ರಮ ಚಿನ್ನ ಸಾಗಾಟ: 10.25 ಲಕ್ಷ ರೂ....

ಮಂಗಳೂರು: ಹ್ಯಾಂಡ್‌ ಬ್ಯಾಗ್‌ ನ ಮೆಟಲ್‌ ರಾಡ್‌ನಲ್ಲಿ ಅಕ್ರಮ ಚಿನ್ನ ಸಾಗಾಟ: 10.25 ಲಕ್ಷ ರೂ. ಮೌಲ್ಯದ ಚಿನ್ನ ವಶ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೇಡಿಸ್ ಹ್ಯಾಂಡ್ ಬ್ಯಾಗ್ ಮೆಟಲ್ ರಾಡ್ ನೊಳಗೆ ಬಚ್ಚಿಟ್ಟು ಅಕ್ರಮ ಸಾಗಾಟ ಮಾಡ್ತಿದ್ದ 10.25 ಲಕ್ಷ ರೂ. ಚಿನ್ನ ವಶಕ್ಕೆ ಪಡೆಯಲಾಗಿದೆ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನ ತಪಾಸಣೆ ವೇಳೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಲೇಡಿಸ್ ಹ್ಯಾಂಡ್ ಬ್ಯಾಗ್ ನ ಮೆಟಲ್ ರಾಡ್ ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದು‌ ಪತ್ತೆಯಾಗಿದೆ.

ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನಿಂದ 192.320 ಗ್ರಾಂ ತೂಕದ 24 ಕ್ಯಾರೆಟ್ 10,25,066 ಲಕ್ಷ ರೂ. ಚಿನ್ನ ವಶಪಡಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!