Wednesday, June 3, 2026
Homeತಾಜಾ ಸುದ್ದಿನಾಳೆ ಡ್ರಗ್ ರಾಣಿ ಸಂಜನಾ ಬರ್ತಡೇ, ಜೈಲಿನಲ್ಲೇ

ನಾಳೆ ಡ್ರಗ್ ರಾಣಿ ಸಂಜನಾ ಬರ್ತಡೇ, ಜೈಲಿನಲ್ಲೇ

- Advertisement -
- Advertisement -

ಬೆಂಗಳೂರು ಡ್ರಗ್ ಕೇಸನಲ್ಲಿ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿರುವ ಸಂಜನಾ ಗರ್ಲಾನಿ ಹಾಗೂ ರಾಗಿಣಿ ಸದ್ಯಕ್ಕಂತೂ ಹೊರಗೆ ಬರೋ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅದರಲ್ಲೂ ಪ್ರತಿ ವರ್ಷ ಧಾಮ್ ಧೂಮ್ ಅಂತಾ ಬರ್ತಡೇ ಆಚರಿಸಿಕೊಳ್ಳುತ್ತಿದ್ದ ಸಂಜನಾ ಈ ವರ್ಷ ಜೈಲಿನಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದೆ.

ಹೌದು…ಅಕ್ಟೋಬರ್ 10 ಅಂದರೆ ನಾಳೆ ನಟಿ ಸಂಜನಾ ಗಲ್ರಾನಿ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಂಜನಾ ಜೈಲಿನಲ್ಲೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲು ಪ್ಲ್ಯಾನ್ ನಡೆಸುತ್ತಿದ್ದಾರೆ ಅನ್ನೋ ಮಾತು ಕೇಳಬಂದಿದೆ.

ಹಾಗಾಗಿ, ನಟಿ ಜೈಲು ಅಧಿಕಾರಿಗಳು ಅನುಮತಿಗೆ ಕಾಯುತ್ತಿದ್ದಾರಂತೆ. ಒಂದು ವೇಳೆ, ಅವರು ಅನುಮತಿ ನೀಡಿದರೆ ಪರಪ್ಪನ ಅಗ್ರಹಾರದಲ್ಲೇ ತಮ್ಮ ಬರ್ತ್‌ಡೇ ಆಚರಿಸಲು ಸಂಜನಾ ಸಜ್ಜಾಗಿದ್ದಾರೆ. ಜೈಲಿನಲ್ಲಿಯೇ ಕೇಕ್ ಕತ್ತರಿಸಿ ಬರ್ತ್​ ಡೇ ಆಚರಿಸುವ ಸಾಧ್ಯತೆಯಿದೆ.

- Advertisement -

Latest News

error: Content is protected !!