Saturday, April 20, 2024
Homeಕರಾವಳಿಇಸ್ಲಾಂ ಕುರಿತು ನೂಪುರ್ ಶರ್ಮಾ ಸತ್ಯ ಹೇಳಿದರೆ ತಪ್ಪಾಗುತ್ತದೆಯೇ? ಝಾಕಿರ್ ನಾಯ್ಕ್, ಮುಲ್ಲಾಗಳು ಹೇಳಿದರೆ ತಪ್ಪಾಗಲ್ಲ.....

ಇಸ್ಲಾಂ ಕುರಿತು ನೂಪುರ್ ಶರ್ಮಾ ಸತ್ಯ ಹೇಳಿದರೆ ತಪ್ಪಾಗುತ್ತದೆಯೇ? ಝಾಕಿರ್ ನಾಯ್ಕ್, ಮುಲ್ಲಾಗಳು ಹೇಳಿದರೆ ತಪ್ಪಾಗಲ್ಲ.. ಎಂದು ಕಿಡಿಕಾರಿದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ

spot_img
- Advertisement -
- Advertisement -
ಮಂಗಳೂರು: ಬಿಜೆಪಿ ನಾಯಕರು ನೂಪುರ್ ಶರ್ಮಾಳನ್ನು ಸಮರ್ಥಿಸುವುದು ಬಿಟ್ಟು ಪಕ್ಷದಿಂದ ತೆಗೆದು ಹಾಕಿ ದೊಡ್ಡ ತಪ್ಪು ಮಾಡಿದ್ದಾರೆ. ಆಕೆ ಇಸ್ಲಾಂ ಬಗ್ಗೆ ಸತ್ಯ ಹೇಳಿದರೆ ತಪ್ಪಾಗುತ್ತದೆಯೇ ? ಝಾಕಿರ್ ನಾಯ್ಕ, ಮುಲ್ಲಾಗಳು ಅದೇ ಮಾತನ್ನು ಹೇಳಿದರೆ ತಪ್ಪಾಗುವುದಿಲ್ಲ. ಒಬ್ಬ ಹಿಂದು ಎನ್ನುವ ಕಾರಣಕ್ಕೆ ನೂಪುರ್ ಶರ್ಮಾ ಹೇಳಿದ್ದು ತಪ್ಪು ಎನ್ನುತ್ತಿದ್ದೀರಾ.. ಎಂದು ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಕಿಡಿಕಾರಿದ್ದಾರೆ.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಈ ಕುರಿತಂತೆ ಪ್ರಶ್ನೆ ಮಾಡಿದ್ದು, ನೂಪುರ್‌ ಶರ್ಮಾ ಯಾವ ತಪ್ಪು ಮಾಡಿದ್ದಾರೆ ಹಾಗೂ ಆಕೆಯ ಯಾವ ಮಾತುಗಳು ಬಿಜೆಪಿಯವರಿಗೆ ತಪ್ಪಾಗಿ ಕಂಡಿವೆ. ಬಿಜೆಪಿಯವರು ಆಕೆಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಏನು ತಪ್ಪು ಹೇಳಿಕೆ ನೀಡಿದ್ದಾರೆಂದು ಸ್ಪಷ್ಟ ಪಡಿಸಬೇಕಿತ್ತು. ಆದರೆ ಆಕೆಯನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಬಿಜೆಪಿ ನಾಯಕರಿಗೆ ಹಿಂದುತ್ವ ಅನ್ನುವುದು ಕೇವಲ ಅಧಿಕಾರಕ್ಕೇರಲು ಮಾತ್ರ. ಹಿಂದುಗಳ ಶ್ರೇಯಸ್ಸು ಅವರಿಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆ ಕುರಿತು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆ ಮಾಡಿದವರಿಗೆ ಇವರದೇ ಸರಕಾರದಲ್ಲಿ ಜೈಲಿನಲ್ಲಿ ರಾಜಾತಿಥ್ಯ ಸಿಗ್ತಾ ಇದೆ. ಒವೈಸಿ ಹಿಂದುಗಳ ವಿರುದ್ಧ ಏನೇ ಹೇಳಿಕೆ ಕೊಟ್ಟರೂ, ಕ್ರಮ ಕೈಗೊಳ್ಳುವುದಿಲ್ಲ. ಹಿಂದು ಮುಖಂಡರು ಯಾವುದೇ ವಿಚಾರ ಕೈಗೆತ್ತಿಕೊಂಡರೂ ಕಾನೂನು ನೆಪ ಹೇಳಿ ಕ್ರಮ ಜರುಗಿಸುತ್ತಾರೆ. ಹಿಂದು- ಮುಸ್ಲಿಮರಿಗೆ ಈ ದೇಶದಲ್ಲಿ ಬೇರೆ ಬೇರೆ ಕಾನೂನು ಇದೆಯೇ. ಹಿಂದುಗಳು ಕೈಯಲ್ಲಾಗದವರಲ್ಲ ನೆನಪಿಟ್ಟುಕೊಳ್ಳಿ ಈ ದೇಶದ ಹಿಂದುಗಳು ಕಾನೂನು, ಸಂವಿಧಾನಕ್ಕೆ ಬೆಲೆ ಕೊಟ್ಟಿದ್ದಾರೆ. ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ತಯಾರಿದ್ದೇವೆ ಎಂದರು.

ಬಿಜೆಪಿಯ ಯಾವುದೇ ಹಿಂದುತ್ವದ ಬ್ರಾಂಡ್ ನಮಗೆ ಬೇಕಾಗಿಲ್ಲ ಎಂದು ಹೇಳಿದ ಧರ್ಮೇಂದ್ರ, ಹಿಂದುತ್ವದ ಹೆಸರೇಳಿ ರಾಜಕೀಯ ಮಾಡಿದವರನ್ನು ಮುಗಿಸಿ ಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಯನ್ನು ಕೆಳಗಿಳಿಸಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿಯೇ ಠಾಕ್ರೆ ಎರಡೂವರೆ ವರ್ಷ ಸಿಎಂ ಹಂಚಿಕೆ ಮಾಡುವ ಪ್ರಸ್ತಾಪ ಮಾಡಿದ್ದರು. ನೀವು ಯಾಕೆ ಬಿಟ್ಟು ಕೊಟ್ಟಿಲ್ಲ. ಈಗ ಹಿಂದುತ್ವದ ರಾಜಕಾರಣ ಮಾಡುವ ಶಿವಸೇನೆಯನ್ನು ಮುಗಿಸಲು ಹುನ್ನಾರ ನಡೆಸುತ್ತಿದ್ದಾರೆ. ಇವರಿಗೆ ಬೇರೆ ಯಾರೂ ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಿಂದು ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಆಗಸ್ಟ್ 14ರ ದಿನವನ್ನು ನಾವು 75ನೇ ವರ್ಷದ ಸಂಕಟ ದಿವಸವನ್ನಾಗಿ ಆಚರಿಸುತ್ತೇವೆ. ಅದರ ಅಂಗವಾಗಿ ಅಂದು ಪ್ರತಿ ಹಿಂದು ಮನೆಯಲ್ಲಿ ಘರ್ ಘರ್ ಭಗವಾ ಹೆಸರಲ್ಲಿ ಕೇಸರಿ ಧ್ವಜ ಹಾರಿಸಲು ಕರೆ ನೀಡಲಾಗಿದೆ ಎಂದು ಹೇಳಿದರು.

ಇನ್ನು ಮುಂದಿನ ಬಿಬಿಎಂಪಿ, ಜಿಪಂ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ರಾಷ್ಟ್ರೀಯ ಹಿಂದು ಪಕ್ಷವಾಗಿ ಹಿಂದು ಮಹಾಸಭಾ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ದೇಶದಲ್ಲಿ ಸತ್ಯ ಹೇಳುವುದೇ ಅಪರಾಧವಾದರೆ, ಮುಂದಿನ ದಿನಗಳಲ್ಲಿ ಹಿಂದುಗಳ ಬದುಕು ದುಸ್ತರವಾಗಲಿದೆ. ಆತಂಕದಲ್ಲಿ ಬದುಕಬೇಕಾಗುತ್ತದೆ. ಅದಕ್ಕಾಗಿ ಹಿಂದು ರಾಷ್ಟ್ರದ ಸ್ಥಾಪನೆ ಹಾಗೂ ರಾಜಕೀಯವನ್ನು ಹಿಂದುತ್ವಗೊಳಿಸುವುದೇ ಉತ್ತರ ಎಂದರು.

ಭಗವಾಧ್ವಜವನ್ನು ಬಿಜೆಪಿ, ಸಂಘ ಪರಿವಾರಕ್ಕೆ ಪೇಟೆಂಟ್ ಕೊಟ್ಟಿಲ್ಲ. ಎಸ್ಟಿಪಿಐ ಜೊತೆಗೆ ಸಂಬಂಧ ಇಟ್ಟುಕೊಂಡವರದ್ದು ಯಾವ ಹಿಂದುತ್ವ. ಹಿಂದುಗಳನ್ನು ಹೊಂದಿರುವ ಕೃತ್ಯದಲ್ಲಿ ಹೆಚ್ಚಿನ ಕಡೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರೇ ಆರೋಪಿಗಳಿದ್ದಾರೆ. ಕನ್ನಯ್ಯಲಾಲ್ ಹತ್ಯೆ ಆರೋಪಿಯೂ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತ. ಎಸ್ಟಿಪಿಐ ಅನ್ನೋದು ಬಿಜೆಪಿಯದ್ದೇ ಕೂಸು, ತತ್ವ ಸಿದ್ಧಾಂತ ಬಲಿಕೊಟ್ಟು ಅವರ ಜೊತೆ ಸೇರಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಈ ವೇಳೆಯಲ್ಲಿ ಆರೋಪಿಸಿದರು.

- Advertisement -
spot_img

Latest News

error: Content is protected !!