Wednesday, October 5, 2022
Homeಕ್ರೀಡೆವಿರಾಟ್‌ ಫಾರ್ಮ್‌ ಬಗ್ಗೆ ತಾಳ್ಮೆ ಕಳೆದುಕೊಂಡ ಬಿಸಿಸಿಐ: ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು

ವಿರಾಟ್‌ ಫಾರ್ಮ್‌ ಬಗ್ಗೆ ತಾಳ್ಮೆ ಕಳೆದುಕೊಂಡ ಬಿಸಿಸಿಐ: ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು

- Advertisement -
- Advertisement -

ಮುಂಬೈ: ಮೂರು ವರ್ಷಗಳ ಹಿಂದಿನವರೆಗೂ ಶತಕ ಬಾರಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯ ಬ್ಯಾಟ್ ಮಂಕಾಗಿದೆ. 2019ರ ನವೆಂಬರ್ ಬಳಿಕ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ವಿರಾಟ್ ಫಾರ್ಮ್ ಬಗ್ಗೆ ಇದುವರೆಗೆ ಏನೂ ಮಾತನಾಡದ ಬಿಸಿಸಿಐ ಈಗ ತಾಳ್ಮೆ ಕಳೆದುಕೊಂಡಿದೆ ಎನ್ನುತ್ತಿದೆ ವರದಿ.

ಇಂಗ್ಲೆಂಡ್ ನಲ್ಲಿ ಗುರುವಾರದಿಂದ ಪ್ರಾರಂಭವಾಗುವ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಆದರೆ ವಿರಾಟ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ಕೊನೆಯ ಸರಣಿಯಾಗುವ ಲಕ್ಷಣ ದಟ್ಟವಾಗಿದೆ. ವಿರಾಟ್ ಈ ಎರಡು ಪಂದ್ಯಗಳಲ್ಲಿ ಮಿಂಚಿದರೆ ಮಾತ್ರ ಅವರನ್ನು ಮುಂದೆ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ ಎನ್ನಲಾಗಿದೆ.

ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿರುವ ಆಟಗಾರರ ಹೆಸರನ್ನು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿದೆ. ವಿರಾಟ್ ಸೇರಿದಂತೆ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್ ಧವನ್ ನಾಯಕನಾಗಿ ಮತ್ತು ರವೀಂದ್ರ ಜಡೇಜಾ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಟಗಾರರು (ಮುಖ್ಯವಾಗಿ ವಿರಾಟ್) ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಆಧಾರದ ಮೇಲೆ ಟಿ20 ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

- Advertisement -
spot_img
spot_img
- Advertisment -

Latest News

error: Content is protected !!